ಮಡಿಕೇರಿ ಅ.28 : ಪೊನ್ನಂಪೇಟೆ ತಾಲ್ಲೂಕಿನ ರುದ್ರಬೀಡು ಗ್ರಾಮ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಹೊನ್ನಿಕೊಪ್ಪಲಿನ ಪ್ರಶಾಂತ್ ಎಂಬುವವರ ಕಾಫಿ ತೋಟದಲ್ಲಿ ಇಂದು ಹುಲಿ ಪ್ರತ್ಯಕ್ಷವಾಗಿದ್ದು, ಕಳೆದ ಮೂರು ದಿನಗಳಿಂದ ಇಲ್ಲೇ ಸುತ್ತಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ತೋಟದಲ್ಲಿ ಕಾಡುಹಂದಿಯ ಕಳೇಬರ ಬಿದ್ದಿದ್ದು, ಇದೇ ಹುಲಿ ಬೇಟೆಯಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಾಡುಹಂದಿಯನ್ನು ಎರಡು ದಿನಗಳ ಹಿಂದೆ ಬೇಟೆಯಾಡಿದ್ದು, ಮಾಂಸವನ್ನು ಭಕ್ಷಿಸಿದ ಕುರುಹುಗಳಿವೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.









