ಮಡಿಕೇರಿ ಅ.28 : ವಿರಾಜಪೇಟೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟ ನಿವಾಸಿಗಳಾದ ಮಹಮ್ಮದ್ ಆಲಿ ಕಲ್ಲುಬಾಣೆ(54), ಸಂದೀಪ ಜಂಗ್ಲಿ ಅರಸುನಗರ (28), ಅಶೋಕ ಬಿಳುಗುಂದ (50) ಹಾಗೂ ಮಹೇಶ ಸುಂಕದಕಟ್ಟೆ (35) ಇವರುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಳಿಯಿಂದ 1.12 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿಯ ಹಿನ್ನೆಲೆ ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ಮೋಹನ್ ಕುಮಾರ್, ವಿರಾಜಪೇಟೆ ವೃತ್ತದ ಬಿ.ಎಸ್.ಶಿವರುದ್ರಪ್ಪ, ಪಿಎಸ್‌ಐಗಳಾದ ರವೀಂದ್ರ, ಗಣಪತಿ.ಪಿ.ಕೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು ದಾಳಿ ನಡೆಸಿದರು.
ದಕ್ಷತೆ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.










