ನಾಪೋಕ್ಲು ಅ.30 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶ್ರೀ ಇಗ್ಗುತ್ತಪ್ಪ ದೇವರ ಪರದಂಡ ಆರಾಧನೆ ಎಂದೇ ಪ್ರಸಿದ್ಧವಾಗಿರುವ ಪತ್ತಾಲೋದಿ ಉತ್ಸವ ಶ್ರದ್ಧಭಕ್ತಿಯಿಂದ ಜರುಗಿತು.
ಉತ್ಸವದ ಅಂಗವಾಗಿ ತುಲಾಭಾರ ಸೇವೆ ಹಾಗೂ ವಿವಿಧ ಪೂಜಾ ಕಾರ್ಯಗಳ ನಂತರ ವಿಶೇಷ ಮಹಾಪ ಪೂಜೆ ನೆರವೇರಿತು.
ಈ ಸಂದರ್ಭ ಸರ್ವ ಸಮುದಾಯದ ಭಕ್ತ ಜನರ ಶ್ರೇಯೋಭಿವೃದ್ಧಿಗೆ ಹಾಗೂ ಕೊಡಗಿನಲ್ಲಿ ಹಸಿರು ನೆಲೆಸಿ ಸುಭಿಕ್ಷೆ ಸಮೃದ್ಧಿಯಿಂದ ಕೂಡಿರುವಂತೆ ದೇವತಕ್ಕರಿಂದ ಪ್ರಾರ್ಥನೆ ಹಾಗೂ ತೀರ್ಥ ಪ್ರಸಾದ ವಿತರಿಸಲಾಯಿತು.
ನಂತರ ಸಂಪ್ರದಾಯದಂತೆ ದೇವರ ನೃತ್ಯ ಬಲಿ ನೆರವೇರಿತು.
ಉತ್ಸವದ ಅಂಗವಾಗಿ ದೇವಾಲಯದ ನಮಸ್ಕಾರ ಮಂಟಪ, ಗರ್ಭಗುಡಿ ಸೇರಿದಂತೆ ಸನ್ನಿಧಿಯ ಆವರಣದಲ್ಲಿ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ಈ ಸಂದರ್ಭ ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರು ಸೇರಿದಂತೆ ಊರ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ