ಮಡಿಕೇರಿ ಅ.30 : ಕೊಡವ ಕುಟುಂಬ ತಂಡಗಳ ನಡುವಿನ ಮೂರನೇ ವರ್ಷದ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆ ಬೊಟ್ಟೋಳಂಡ ಕಪ್ ಲೋಗೋ ಅನಾವಣಗೊಳಿಸಲಾಯಿತು.
ಮಡಿಕೇರಿ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಲಾಂಛನ ಅನಾವರಣ ಮಾಡಿದರು.
ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತೀತೀರ ರೋಷನ್ ಅಪ್ಪಚ್ಚು, ಟಗ್ ಆಫ್ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಳತಂಡ ಕಿರಣ್ ಸೊನ್ನಪ್ಪ ಮತ್ತಿತರರು ಇದ್ದರು. ಪ್ರಥಮ ವರ್ಷ ಪೊನ್ನೋಳತಂಡ ಕಪ್, ದ್ವಿತೀಯ ವರ್ಷ ಚೆಟ್ಟಂಗಡ ಕಪ್ ನಡೆದಿತ್ತು.