ಸೋಮವಾರಪೇಟೆ ನ.1 : ಪಟ್ಟಣದ ಸಿ.ಎಸ್.ಐ ಜಾನ್ ಚರ್ಚ್ ನಲ್ಲಿ ಫಲೋತ್ಸವ ಸಂಭ್ರಮದಿಂದ ನಡೆಯಿತು.
ಪ್ರಥಮ ಬೆಳೆಯನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು.
ಸದರನ್ ಡಯಾಸಿಸ್ ಉಪಾಧ್ಯಕ್ಷ ವಿಕ್ಟರ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಸ್ಥಳೀಯ ಸಭಾಪಾಲಕರಾದ ಸ್ಯಾಮುವೆಲ್, ಸಹಾಯಕ ಸಭಾಪಾಲಕರಾದ ಪ್ರಿಯದರ್ಶಿನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರರಾದ ಎಲಿಜಬೆತ್ ಸಾಲೋಮನ್ ಅವರನ್ನು ಸನ್ಮಾನಿಸಲಾಯಿತು.
ನಂತರ ಪ್ರಿಯದರ್ಶಿನಿ, ಸುಜಾತ ಜೋಸೆಫ್, ನಮಿತಾ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಡಯಾಸಿಸ್ ಕೌನ್ಸಿಲ್ ಸದಸ್ಯ ಸಾಲೋಮನ್ ಡೇವಿಡ್, ಏರಿಯಾ ಕೌನ್ಸಿಲ್ ಸದಸ್ಯ ಅನಿಲ್ ಮತ್ತು ಕಾರ್ಯದರ್ಶಿ ಎಬ್ನೆಜರ್ ಚಾರ್ಲಿ ಇದ್ದರು.










