ಮಡಿಕೇರಿ ನ.1 : ಡಿವೈನ್ ಪಾರ್ಕ್ ಸಂಸ್ಥೆಯ ಅಂಗಸಂಸ್ಥೆಯಾದ ಮೂರ್ನಾಡು ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಸಂಪದ ಓದುಗರ ಸಮಾವೇಶ ನಡೆಯಿತು.
ಸಿದ್ದಾಪುರದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಡಿವೈನ್ ಪಾರ್ಕ್‍ನ ಅಧಿಕಾರಿ ಗುರುಪ್ರಸಾದ್ ಓದುಗರ ಸಮಾವೇಶದ ಕುರಿತು ವಿವರಿಸಿದರು.
ವಿವೇಕವನ್ನೇ ಸಂಪದವಾಗಿಸಿಕೊಂಡಿರುವ ಪುಸ್ತಕ, ಸ್ವಾಮಿ ವಿವೇಕಾನಂದರ ಜಾಗೃತ ಚೇತನವೇ ಪುಸ್ತಕದ ಸಂಪಾದಕೀಯದ ಜವಾಬ್ದಾರಿ ಹೊತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ವಿಚಾರವನ್ನು ಹೊತ್ತ ಚಾತುರ್ಮಾಸಿಕ ಪತ್ರಿಕೆ. ಭಗವಂತನಿಗೆ ಮೊದಲ ಆದ್ಯತೆ ನೀಡಿದೆ. ಆದರೆ ಬದುಕು ಜಟಕಾಬಂಡಿಯಾಗದೆ, ಭಗವಂತನ ಕೃಪಾಬಂಡಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗೃತ ಬಗಳಗದ ಅಧ್ಯಕ್ಷೆ ದಿವ್ಯ ತೇಜಕುಮಾರ್, ಉಪಾಧ್ಯಕ್ಷ ಯಶವಂತ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಶೃತಿ ಸ್ವಾಗತಿಸಿದರು. ಬಿ.ಜಿ.ಸೌಮ್ಯ ನಿರೂಪಿಸಿದರು. ಸಿ.ಜಿ.ಲೀಲಾವತಿ ವಂದಿಸಿದರು. ಸುಮಾರು ನೂರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.









