ಮಡಿಕೇರಿ ನ.2 : ವಿರಾಜಪೇಟೆ ತಾಲ್ಲೂಕಿನ ಪೊದಕೋಟೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಳೆದ ಒಂದು ವಾರದಿಂದ ಸುಮಾರು ಮೂರು ಕಾಡಾನೆಗಳು ಗದ್ದೆ ಮತ್ತು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಫಸಲನ್ನು ನಾಶ ಪಡಿಸುತ್ತಿವೆ.
ಸ್ಥಳೀಯ ರೈತ ಮಂಡೇಪಂಡ ಗಣಪತಿ ಅವರ ಗದ್ದೆಯಲ್ಲಿ ಬೆಳೆದ ಬೆಳೆಯನ್ನು ಧ್ವಂಸ ಮಾಡಿರುವ ಆನೆಗಳು ತೋಟಗಳಿಗೂ ನುಗ್ಗಿ ಹಾನಿ ಮಾಡಿವೆ. ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆನಷ್ಟಕ್ಕೆ ತಕ್ಷಣ ಪರಿಹಾರ ವಿತರಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.









