ವಿರಾಜಪೇಟೆ ನ.3 : ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ತಂಡದ ವತಿಯಿಂದ ನ.17, 18 ಹಾಗೂ 19 ರಂದು ನಡೆಯಲಿರುವ ಕಲ್ಲುಬಾಯ್ಸ್ ನೈಸ್- ಹೈಟೆಕ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅನಾವರಣಗೊಳಿಸಿದರು.
ಕಲ್ಲುಬಾಣೆಯ ಬದ್ರಿಯ ಶಾಲಾ ಆವರಣದಲ್ಲಿ ನಡೆದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಾಂಛನ ಅನಾವರಣಗೊಳಿಸಿ, ಕಾರ್ಯಕ್ರಮದ ಪೋಸ್ಟರ್‍ನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭ ಕಲ್ಲುಬಾಯ್ಸ್ ತಂಡದ ಅಧ್ಯಕ್ಷ ರಹೀಂ ಮಾತನಾಡಿ, ಟಿ.17ರಂದು ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆಯಲಿದ್ದು, ಇಂಡಿಯನ್ ಪೂಟ್ಬಾಲ್ ಆಟಗಾರ ಮಹಮ್ಮದ್ ರಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇನ್ನಿತ್ತರ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಲ್ಲುಬಾಯ್ಸ್ ತಂಡದ ಸದಸ್ಯರಾದ ನೌಫಲ್, ಫೈಜಲ್, ಶಾಫಿ, ಫಾಜಿಲ್, ಆರ್ಜಿ ಗ್ರಾಮ ಪಂಚಾಯಿತಿಯ ಸದಸ್ಯ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಟಿ. ಬಷೀರ್, ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಶಹದೀರ್ ಅಲಿ, ಎಂ.ಇ ಮೊಯಿದ್ದೀನ್ ಕುಟ್ಟಿ, ಕಾಂಗ್ರೇಸ್ ವಲಯ ಅಧ್ಯಕ್ಷ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಾಫರ್, ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಪೇಂದ್ರ, ಅನೂಪ್, ಅನ್ ಜೋವಿಟಾ, ಆರ್ಜಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ, ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲ್ಲುಬಾಣೆಯ ಗ್ರಾಮಸ್ಥರು ಹಾಜರಿದ್ದರು.









