ಸುಂಟಿಕೊಪ್ಪ ನ.5 : ಮಾದಾಪುರದ ಎಸ್‌ಜೆಎಂ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಗಮನ ಸೆಳೆಯಿತು. ನಿತ್ಯ ಶಾಲಾ ಆವರಣದಲ್ಲಿ ಪಾಠ ಪ್ರವಚನದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಇಂದು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು.
ತೋಟಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಕಾಯಿ ಪಲ್ಯಗಳು, ಆಹಾರ ತಿಂಡಿ ತಿನ್ನಿಸುಗಳು, ಕಾಫಿ, ಟೀ ಸೇರಿದಂತೆ ತಂಪು ಪಾನೀಯಗಳ ವ್ಯಾಪಾರ ಬಲು ಜೋರಾಗಿ ನಡೆಸಿದರು. ಶಾಲಾಡಳಿತ ಮಂಡಳಿಯ ಪ್ರಮುಖರು, ಮುಖ್ಯೋಪಾದ್ಯಾಯರು, ಶಿಕ್ಷಕ, ಶಿಕ್ಷಕಿಯರು, ಪೋಷಕರು ಇದ್ದರು.










