ಮಡಿಕೇರಿ ನ.5 : ಸಂಪಾಜೆ ಸಮೀಪ ಅರಂತೋಡು ಭಾಗದಲ್ಲಿ ಅಡಿಕೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಡ್ತಲೆ ನಿವಾಸಿ ಮೋಹನ್ ಪಂಜದಬೈಲು ಅವರ ತೋಟದಿಂದ ಅಡಿಕೆ ಕಳ್ಳತನವಾಗಿದೆ. ಇಂಟರ್ ಮಂಗಳ ಅಡಿಕೆ ಬೆಳೆಯಲಾಗಿದ್ದು, ಕೈಗೆಟುಕುವಷ್ಟು ಎತ್ತರದಲ್ಲಿ ಅಡಿಕೆ ಗೊನೆಗಳಿವೆ. ಇವುಗಳನ್ನು ಮಾತ್ರವಲ್ಲದೆ ಇತರ ಮರಗಳಿಂದ ಕೂಡ ಹಣ್ಣಾದ ಅಡಿಕೆಗಳನ್ನು ಕಳ್ಳತನ ಮಾಡಲಾಗಿದೆ.
ಮೋಹನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಚೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇತರ ಬೆಳೆಗಾರರು ಕೂಡ ಒತ್ತಾಯಿಸಿದ್ದಾರೆ.











