ಮಡಿಕೇರಿ ನ.10 : ಕುಶಾಲನಗರದ ಕಾಫಿ ಉದ್ಯಮಿ ನರೇಂದ್ರ ಹೆಬ್ಬಾರ್ (57) ಅವರು ನಿಧನ ಹೊಂದಿದ್ದಾರೆ. ಕಾಫಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಐದು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಅವರು ಅಸ್ವಸ್ಥಗೊಂಡಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಹೊಂದಿದರು. ಸಿದ್ದಾಪುರದ ನಿವಾಸಿಯಾಗಿರುವ ನರೇಂದ್ರ ಅವರು ಕುಶಾಲನಗರ ಸಮೀಪ ಕೊಪ್ಪದಲ್ಲಿ ಕಾಫಿ ಕೆಫೆಯನ್ನು ಹೊಂದಿದ್ದರು. ಜಿಲ್ಲೆಯ ಕಾಫಿ ಉದ್ಯಮಿಗಳು ನರೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.









