ಮಡಿಕೇರಿ ನ.13 : ಕೊಡಗಿನ ಪುತ್ತರಿ ಹಬ್ಬ ನ.27 ರಂದು ನಡೆಯಲಿದೆ. ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಇಂದು ಹಬ್ಬದ ದಿನ ನಿಗದಿ ಮಾಡಲಾಯಿತು.
ರಾತ್ರಿ 7.20ಕ್ಕೆ ನೆರೆ ಕಟ್ಟುವುದು, 8.20ಕ್ಕೆ ಕದಿರು ತೆಗೆಯುವುದು, ರಾತ್ರಿ 9.20ಕ್ಕೆ ಪ್ರಸಾದ ಸ್ವೀಕಾರ. ಅದರಂತೆ ನಾಡಿನಾದ್ಯಂತ ರಾತ್ರಿ 7.45ಕ್ಕೆ ನೆರೆ ಕಟ್ಟುವುದು, 8.45ಕ್ಕೆ ಕದಿರು ತೆಗೆಯುವುದು, ರಾತ್ರಿ 9.45ಕ್ಕೆ ಬೋಜನಕ್ಕೆ ಒಳ್ಳೆಯ ಸಮಯ ಎಂದು ಹಿರಿಯರು ತಿಳಿಸಿದರು.