ವಿರಾಜಪೇಟೆ ನ.13 : ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿರಾಜಪೇಟೆ ಪ್ರಖಂಡದಿಂದ ಕಾವಾಡಿ ಶ್ರೀ ಗೋ ಶಾಲೆಯಲ್ಲಿ ಗೋ ಪೂಜೆಯನ್ನು ನಡೆಯಿತು.
ಮುಕ್ಕೋಟಿ ದೇವರುಗಳು ಗೋವಿನಲ್ಲಿ ನೆಲೆಯಾಗಿದೆ, ಅಮೃತ ರೂಪವಾಗಿ ಕ್ಷೀರವನ್ನೇ ಕೊಡುವ ಮಾತೆ ಗೋವು. ಗೋ ಪರಿಪಾಲಕನಾದ ಕೃಷ್ಣನಿಗೆ ಪ್ರಿಯವಾದ ಕಾಮಧೇನು ಗೋವು ಆಗಿದೆ ಎಂದು ಗೋ ಪೂಜೆ ಮಾಹಿತಿ ನೀಡಿದರು.
ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಕುಟ್ಟಂಡ ಪ್ರೀನ್ಸ್ ಗಣಪತಿ, ಸೇವಾ ಭಾರತೀಯ ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ವಿವೇಕ್ ರೈ, ತಾಲ್ಲೂಕು ಸಂಚಾಲಕ ಐನಂಡ ಕುಶಾಲಪ್ಪ, ಗೋ ಪರಿವಾರದ ಸೋಮಶೇಖರ್, ಜಾಗರಣ ವೇದಿಕೆ ತಾಲೂಕು ಸಂಚಾಲಕ ಗಣೇಶ್, ಗೋರಕ್ಷಾ ಪ್ರಮುಖ್ ಶರೀನ್, ರಾಜ, ವಿಶ್ವ ಹಾಗೂ ಸಂಘಟನೆ ಪ್ರಮುಖರು ಹಾಜರಿದ್ದರು.










