ಮಂಗಳೂರು ನ.13 : ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಅವರಿಂದ ಬಳುವಳಿಯಾಗಿ ಬಂದ ನಾಗಸ್ವರ ವಾದನವನ್ನು ಕಳೆದ 40 ವರ್ಷಗಳಿಂದ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದ ಕಾಪುವಿನ ಶೇಖ್ ಜಲೀಲ್ ಸಾಹೇಬ್ (56) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಜಾತ್ರೆಯ ವೇಳೆ ನಾಗಸ್ವರ ಸೇವೆ ನೀಡುತ್ತಿದ್ದ ಉಡುಪಿ ಜಿಲ್ಲೆಯ ಕಾಪುವಿನ ಶೇಖ್ ಜಲೀಲ್ ಸಾಹೇಬ್ ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಹೋಟೆಲ್ ನಲ್ಲಿ ಚಹಾ ಕುಡಿಯಲು ಕುಳಿತ್ತಿದ್ದ ವೇಳೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
ಕೋಲ ಮತ್ತು ಆಶ್ಲೇಷ ಬಲಿ ಸಂದರ್ಭ ನಾಗಸ್ವರ ಸೇವೆ ಸಲ್ಲಿಸುತ್ತಿದ್ದ ಶೇಖ್ ಜಲೀಲ್ ಸಾಹೇಬ್ ಅವರು ಪತ್ನಿ, ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.