ಮಡಿಕೇರಿ ನ.15 : ಪ್ರಸಕ್ತ(2023-24) ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗ ಹಾಗೂ ಗುಂಪು ಉದ್ಯಮಶೀಲತೆ ಮತ್ತು ಎಸ್‍ಎಚ್‍ಜಿ ಗುಂಪು ರಚನೆಗೆ ಮಡಿಕೇರಿ ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉದ್ದೇಶಿಸಿರುವ ಚಟುವಟಿಕೆಯ ಬಗ್ಗೆ ಅನುಭವ ಹೊಂದಿದ್ದರೆ/ತರಬೇತಿ ಪಡೆದಿದ್ದರೆ ಪ್ರಮಾಣ ಪತ್ರ, ಯೋಜನಾ ವರದಿ, ಬಿಪಿಎಲ್ ರೇಷನ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣ ಪತ್ರ, ವೈಯಕ್ತಿಕ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಇತ್ತೀಚಿನ ಭಾವಚಿತ್ರ, ಅಂಗವಿಕಲರಾಗಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರ, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ರೂ.20 ಛಾಪಾ ಕಾಗದದ ಮೇಲೆ ನಲ್ಮ್ ಯೋಜನೆಯ ಪೋಷಣ ಪ್ರಮಾಣ ಪತ್ರ, ನೋಟರಿಯಿಂದ ದೃಢೀಕರಿಸಿದ ಪ್ರತಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನ.27 ಕೊನೆ ದಿನವಾಗಿದೆ. ನಂತರ ಬಂದಂತಹ ಅರ್ಜಿಯನ್ನು ಪರಿಗಣಿಸುವುದಿಲ್ಲ. ಮುಂದೆ ಹಾಜರು ಪಡಿಸಬಹುದಾದಂತಹ ಅಗತ್ಯ ದಾಖಲಾತಿಗಳನ್ನು ಒದಗಿಸುವ ಷರತ್ತಿಗೆ ಕಡ್ಡಾಯವಾಗಿ ಒಳಪಡಿಸಿದೆ ಎಂದು ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.









