ಸೋಮವಾರಪೇಟೆ ನ.15 : ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಮಡಿಕೇರಿ ರಾಜ್ಯ ಹೆದ್ದಾರಿ ನಗರೂರು ಜಂಕ್ಷನ್ ನಲ್ಲಿ ಬುಧವಾರ ಸಂಭವಿಸಿದೆ.
ತಾಲ್ಲೂಕಿನ ಇನಕನಹಳ್ಳಿ ಗ್ರಾಮದ ವಿಜಯ್, ದ್ಯಾನ್, ಕಾರೇಕೊಪ್ಪ ಗ್ರಾಮದ ಭಾಸ್ಕರ್, ನಿದೀಶ್, ವಿನೋದ್ ಕುಮಾರ್ ಗಾಯಗೊಂಡಿದ್ದಾರೆ.
ಭಾಸ್ಕರ್, ವಿಜಯ್ ಎಂಬವರ ತೊಡೆ ಭಾಗ ಮುರಿದಿದ್ದು, ತಲೆಗೆ ತೀವ್ರ ತರದ ಗಾಯವಾಗಿದೆ. ವಿನೋದ್ ಕುಮಾರ್ ತಲೆಭಾಗಕ್ಕೆ ತೀವ್ರತರದ ಗಾಯವಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿಲಾಗಿದೆ.
ಕಾರೇಕೊಪ್ಪದ ಮೂವರು ಬೈಕ್ ನಲ್ಲಿ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಸಂದರ್ಭ ಮಡಿಕೇರಿಗೆ ತೆರಳುತ್ತಿದ್ದ ವಿಜಯ್ ಅವರ ಬೈಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಠಾಣಾಧಿಕಾರಿ ರಾಮಚಂದ್ರನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










