Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡವ ಸಮಾಜಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ : ಪೊನ್ನಂಪೇಟೆ ತಂಡ ಚಾಂಪಿಯನ್ : ವಿರಾಜಪೇಟೆ (ಎ) ತಂಡ ರನ್ನರ್ ಅಪ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡವ ಸಮಾಜಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ : ಪೊನ್ನಂಪೇಟೆ ತಂಡ ಚಾಂಪಿಯನ್ : ವಿರಾಜಪೇಟೆ (ಎ) ತಂಡ ರನ್ನರ್ ಅಪ್

ನವೆಂಬರ್ 17, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ವಿರಾಜಪೇಟೆ ನ.17 : ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆದ ಅಂತರ್ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದ್ದು, ವಿರಾಜಪೇಟೆ ಕೊಡವ ಸಮಾಜ (ಎ) ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವಿರಾಜಪೇಟೆ ಪದವಿ ಪೂರ್ವ ಮೈದಾನದಲ್ಲಿ ಆರಂಭಗೊಂಡ ಪಂದ್ಯಾವಳಿಯಲ್ಲಿ ನಾಪೋಕ್ಲು, ವಿರಾಜಪೇಟೆ ಎ ಹಾಗೂ ವಿರಾಜಪೇಟೆ ಬಿ, ಟಿ.ಶೆಟ್ಟಿಗೇರಿ ಎ ಹಾಗೂ ಬಿ, ಪೊನ್ನಂಪೇಟೆ, ಕುಶಾಲನಗರ, ಬಾಳೆಲೆ, ಮಕ್ಕಂದೂರು ಮತ್ತು ಮೂರ್ನಾಡು ಕೊಡವ ಸಮಾಜಗಳು ಭಾಗವಹಿಸಿದ್ದವು.

ಫೈನಲ್ ಫಲಿತಾಂಶ : ವಿರಾಜಪೇಟೆ ಕೊಡವ ಸಮಾಜ ಎ ಮತ್ತು ಪೊನ್ನಂಪೇಟೆ ಕೊಡವ ಸಮಾಜ ತಂಡಗಳ ನಡುವಿನ ಫೈನಲ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಪೊನ್ನಂಪೇಟೆ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ವಿರಾಜಪೇಟೆ ಕೊಡವ ಸಮಾಜದ ಪರವಾಗಿ ಕರ್ನಾಟಕ ಪ್ರೀಮಿಯರ್ ಲೀಗ್‍ನಲ್ಲಿ ಆಡಿರುವ ದರ್ಶನ್ ಮಾಚಯ್ಯ 17 ರನ್ ಗಳಿಸಿ ಔಟಾದರೆ, ನಿಗದಿತ 12 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿ 94 ರನ್‍ಗಳ ಗುರಿಯನ್ನು ಎದುರಾಳಿಗೆ ನೀಡಿತು.
ಪೊನ್ನಂಪೇಟೆ ಕೊಡವ ಸಮಾಜದ ಶರಣ್ ಅಯ್ಯಪ್ಪ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 22 ರನ್‍ಗಳು ನೀಡಿ 3 ಕಸಿದುಕೊಂಡಿತು. ಪೊನ್ನಂಪೇಟೆ ಕೊಡವ ಸಮಾಜದ ಶರಣ್ ಅಯ್ಯಪ್ಪ ತನ್ನ ಆಲ್‍ರೌಂಡ್ ಪ್ರದರ್ಶನ ನೀಡಿ ವೈಯಕ್ತಿಕ 27 ರನ್ ಗಳಿಸಿದರು. ಕೊನೆ ಹಂತದ ಎರಡು ಓವರ್‍ಗಳು ರೋಚಕತೆ ಮೂಡಿಸಿತು.
ತಂಡ 5 ವಿಕೆಟ್ ಕಳೆದುಕೊಂಡರು ಗುರಿಗಿಂತ 5 ರನ್ ಹೆಚ್ಚು ಗಳಿಸಿ ಗೆಲುವಿನ ನಗೆಬೀರಿತು.
ವಿರಾಜಪೇಟೆ ಕೊಡವ ಸಮಾಜದ ಬೊಳಕಾರಂಡ ದರ್ಶನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ತನ್ನದಾಗಸಿಕೊಂಡರು.

ಉಬಯ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಹಾಗೂ ವ್ಯಯುಕ್ತಿಕ ಪುರಾಸ್ಕಾರ ನೀಡಿ ಗೌರವಿಸಲಾಯಿತು. ಸೆಮಿಫೈನಲ್ ಪಂದ್ಯಾವಳಿಯಲ್ಲಿ ಸೊಲೂಂಡ ಎರಡು ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯ ಉತ್ತಮ ಬೌಲರ್ ಪ್ರಶಸ್ತಿಯನ್ನು ಆಟ್ರಂಗಡ ತಶ್ವೀನ್ ಉತ್ತಮ ಬ್ಯಾಟ್ಸ್‍ಮೆನ್ ಪ್ರಶಸ್ತಿ, ಮಂಡೆಪಂಡ ತಿಮ್ಮಯ್ಯ ಮತ್ತು ಸರಣಿ ಪುರುಶೋತ್ತಮ ಪ್ರಶಸ್ತಿಯನ್ನು ಮುಕ್ಕಾಟೀರ ಲಸಿತ್ ಮಾದಪ್ಪ ಪಡೆದುಕೊಂಡರು.

ಅದೇಯಂಗಡ ಶಾಶ್ವತ್, ನವೀನ್ ಚೆಕ್ಕೇರ, ಅಳಮೆಂಗಡ ಮೋನಾ ಚೆಂಗಪ್ಪ, ಮಾಚಂಗಡ ದರ್ಶನ್, ಕೊಕ್ಕೆಂಗಡ ರಂಜಿ, ಮತ್ತು ಕೊಟ್ಟಂಗಡ ಸೂರಜ್ ತೀರ್ಪುಗಾರಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಕಾಂಡೇರ ಡಾನ್ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.

ಸಮಾರೋಪ ಸಮಾರಂಭ : ಫೈನಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಿಬ್ಲಿಕ್ ಟಿ.ವಿ ನೆಟ್‍ವಕ್ರ್ಸ್ ನ ಅಧ್ಯಕ್ಷ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿಯ ಉಪಧ್ಯಕ್ಷ ಚೇರಂಡ ಕಿಶನ್, ಇಂದು ಲೆದರ್ ಬಾಲ್ ಕ್ರಿಕೆಟ್‍ನಲ್ಲಿ ವಿಫುಲ ಅವಕಾಶಗಳಿವೆ. ಕೊಡವ ಜನಾಂಗದ ಬೆರಳಣಿಕೆಯ ಕ್ರಿಕೆಟ್ ಪಟುಗಳು ಮಾತ್ರ ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತಿದ್ದಾರೆ. ಲೆದರ್ ಬಾಲ್ ಕ್ರಿಕೆಟ್ ಗೆ ಪ್ರೋತ್ಸಾಹ ಮತ್ತು ಉತ್ತಮ ಪಟುಗಳ ಆಯ್ಕೆ ಮಾಡುವ ನಿಟ್ಟಿನಲ್ಲಿ ಅಂತರ್ ಕೊಡವ ಸಮಾಜಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಪ್ರಕಾಶ್ ಮಾತನಾಡಿ, ಕೊಡಗು ಕ್ರೀಡಾ ಕಲಿಗಳ ನಾಡು. ಹಾಕಿ ಪಂದ್ಯಕ್ಕೆ ಮಾನ್ಯತೆ ನೀಡಿದಂತೆ ಕ್ರಿಕೆಟ್ ಪಂದ್ಯಾವಳಿಗೂ ಪ್ರೋತ್ಸಾಹ ನೀಡುವಂತಾಗಬೇಕು. ಕೊಡವ ಕ್ರಿಕೆಟ್ ಅಕಾಡೆಮಿಯ ಈ ಪಂದ್ಯಾವಳಿಯು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತದೆ ಎಂದು ಹೇಳಿದರು.

ಮಾಚಿಮಾಡ ದೇವಾನಂದ್ ಮಾತನಾಡಿ, ಕೊಡವ ಸಮಾಜದ ನಡುವೆ ನಡೆಯುತ್ತಿರುವ ಕ್ರಿಕೆಟ್ ಹೆಚ್ಚು ಪ್ರಚಲಿತವಾಗಬೇಕು ಮತ್ತು ಜನಾಂಗ ಬಾಂಧವರು ಹೆಚ್ಚು ಸಹಕಾರ ನೀಡುವಂತಾಗಬೇಕು ಎಂದು ಹೇಳಿದರು.

ಧಾನಿಗಳು ಮತ್ತು ಕಾಫಿ ಬೆಳೆಗಾರರಾದ ಅಳೆಮೆಂಗಡ ಮೋನಾ ಚೆಂಗಪ್ಪ ಅವರು ಮಾತನಾಡಿ, ಕ್ರಿಕೆಟ್ ಎಂಬುದು ಶಿಸ್ತುಬದ್ಧ ಕ್ರೀಡೆಯಾಗಿದೆ. ಲೆದರ್ ಬಾಲ್ ನಲ್ಲಿ ಆಟವಾಡುವುದರಿಂದ ಜಿಲ್ಲೆ, ರಾಜ್ಯ ಮತ್ತು ದೇಶ ಹಾಗೂ ಅಂತರ್ ರಾಷ್ಟøಮಟ್ಟದಲ್ಲಿ ಪ್ರತಿನಿಧಿಸಬಹುದಾಗಿದೆ. ಕೊಡವ ಕ್ರಿಕೆಟ್ ಅಕಾಡೆಮಿ ಈ ಪ್ರಯೋಗವು ಹೆಚ್ಚು ಹೆಚ್ಚು ಕ್ರಿಕೆಟ್ ಪಟುಗಳನ್ನು ಹುಟ್ಟುಹಾಕುವ ವೇದಿಕೆಯಂತೆ. ಮುಂದಿನ ದಿನಗಳಲ್ಲಿ ಆಯೋಜಿಸುವ ಪ್ರತಿಯೋಂದು ಕ್ರಿಕೆಟ್ ಪಂದ್ಯಕ್ಕೆ ತಾನು ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಅಕಾಡೆಮಿಯು ಸುಮಾರು 20 ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಕೊಂಡು ಬರುತ್ತಿದ್ದು. ಲೇದರ್ ಬಾಲ್ ಕ್ರಿಕೆಟ್‍ಗೆ ಉತ್ತೇಜನ ಹಾಗೂ ಕೊಡವ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ಕೊಡವ ಸಮಾಜಗಳ ನಡುವಿಣ ಪಂದ್ಯಾಟವನ್ನು ಆಯೋಜಿದೆ. ಎಲ್ಲಾ ಕೊಡವ ಸಮಾಜಗಳ ಸಹಕಾರ, ದಾನಿಗಳ ನೆರವು, ಮತ್ತು ಅಕಾಡೆಮಿಯ ಸದಸ್ಯರ ಅವಿರತ ಶ್ರಮದಿಂದ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಕೊಟ್ಟಂಗಡ ಕೆ.ಜೋಯಪ್ಪ, ಮಾದಂಡ ತಿಮ್ಮಯ್ಯ, ಹಿರಿಯರಾದ ನಾಯಡ ವಾಸು ನಂಜಪ್ಪ, ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೆಶಕರು, ಸದಸ್ಯರು, ವಿವಿಧ ಕೊಡವ ಸಮಾಜಗಳ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಕೊಕ್ಕಂಗಡ ರಂಜನ್ ಸ್ವಾಗತಿಸಿದರು. ಕಾಂಡೇರ ಡಾನ್ ಕುಶಾಲಪ್ಪ ನಿರೂಪಿಸಿದರು. ಮಾಚಂಗಡ ಸೋಮಣ್ಣ ವಂದಿಸಿದರು.

ವರದಿ ; ಟಿ.ಜೆ.ಕಿಶೋರ್ ಕುಮಾರ್ ಶೆಟ್ಟಿ 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮೂರ್ನಾಡು, NEWS DESK ಅ.17: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಅ.20ರಂದು ಮೂರ್ನಾಡಿನಲ್ಲಿ 33ನೇ…

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ಇಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿ ದಸರಾ ಸಂಭ್ರಮಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ; ಪ್ರಾಣಿ ಪ್ರಿಯರ ಮನಗೆದ್ದ ವಿವಿಧ ತಳಿಗಳು

ಅಕ್ಟೋಬರ್ 17, 2026

SSLC, ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ: ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ

ಅಕ್ಟೋಬರ್ 17, 2026

ನಾಳೆ ಮಡಿಕೇರಿಯಲ್ಲಿ ಮಹಿಳಾ ದಸರಾ: ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 17, 2026

ಅ.19ರಂದು ರೋಟರಿ ಮಡಿಕೇರಿಯಿಂದ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.