ಸುಂಟಿಕೊಪ್ಪ ನ.19 : ಗೆಲುವಿನ ರುವಾರಿ ಸೆಸ್ಟೋ ಬಾಲ್ ತಂಡದ ನಾಯಕ ಶಾಹಿಲ್ ಉಸ್ಮಾನ್ ಮತ್ತು ಆಟಗಾರ ಇರ್ಷಾದ್ ಮುಸ್ತಫಾ ಅವರುಗಳನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.
ಇತ್ತೀಚೆಗೆ ಅಂತರಾಷ್ಟ್ರೀಯ ಸೆಸ್ಟೋ ಬಾಲ್ ಚಾಂಪಿಯನ್ ಶಿಪ್‌ನ ಭಾರತ ಪುರುಷರ ತಂಡದ ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಜಯಗಳಿಸಿ ಆಗಮಿಸಿದ ಭಾರತೀಯ ಪುರುಷರ ಸೆಸ್ಟೋ ಬಾಲ್ ತಂಡದ ನಾಯಕ ಶಾಹಿಲ್ ಉಸ್ಮಾನ್ ಹಾಗೂ ಅತ್ಯುತ್ತಮ ಆಟಗಾರ ಇರ್ಷಾದ್ ಮುಸ್ತಫಾ ಅವರನ್ನು ಸುಂಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಾಲಯದ ಬಳಿಯಿಂದ ತೆರೆದ ಜೀಪ್ ನಲ್ಲಿ ಮೆರವಣಿಗೆಯ ಮೂಲಕ ಕರೆತಂದು ಕನ್ನಡ ವೃತ್ತದ ಬಳಿ ಆತ್ಮೀಯ ಸ್ಚಾಗತ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಮಾಲಾರ್ಪಣೆ ಮಾಡುವ ಮೂಲಕ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಬೀರ್, ಆಲಿಕುಟ್ಟಿ, ವಾಹನ ಚಾಲಕರ ಸಂಘದ ಅಧ್ಯಕ್ಚ ಸುರೇಶ್, ಮಾಜಿ ಅಧ್ಯಕ್ಷರುಗಳಾದ ಅಚ್ಚುಪ, ಬಿ.ಎಂ.ಪೂವಪ್ಪ, ಬಿಲ್ಲವ ಸಂಘದ ಬಿ.ಕೆ.ಮೋಹನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಸದಸ್ಯರು, ರಜನಿಕಾಂತ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಮಣಿ, ಕೆ.ಎ.ಶರೀಫ್, ಲತೀಫ್, ಪುತ್ತುಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.









