ಸುಂಟಿಕೊಪ್ಪ ನ.22 : ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕ್ರ್ವೊಂದು ರಸ್ತೆ ಬದಿಯ ಹೊಟೇಲ್ವೊಂದಕ್ಕೆ ನುಗ್ಗಿರುವ ಘಟನೆ ಗದ್ದೆಹಳ್ಳದಲ್ಲಿ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕುಶಾಲನಗರ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರೊಂದು ರಾತ್ರಿ 1 ಗಂಟೆಯ ಸುಮಾರಿಗೆ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದ ಮಸೀದಿ ಸಮೀಪದ, ಹಂಸ ಎಂಬವರಿಗೆ ಸೇರಿದ ಹೋಟೆಲ್ಗೆ ಡಿಕ್ಕಿಯಾಗಿದೆ. ಇದರಿಂದ ಹೋಟೆಲ್ ಮುಂಭಾಗ ಸೇರಿದಂತೆ, ಅದರ ಒತ್ತಿನಲ್ಲಿರುವ ಕೆ.ಕೆ. ಸೌಂಡ್ಸ್ ಶಾಮಿಯಾನ ಅಂಗಡಿಗೆ ಹಾನಿಯಾಗಿದೆ.
ಈ ಸಂದರ್ಭ ಹೋಟೆಲ್ ಮತ್ತು ಸೌಂಡ್ಸ್ ಮಳಿಗೆಯಲ್ಲಿ ಯಾರು ಇರಲಿಲ್ಲವಾದ್ದರಿಂದ, ಸಂಭವನೀಯ ಭಾರೀ ಅನಾಹುತ ತಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.