ಮಡಿಕೇರಿ ನ.22 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 07 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿರುತ್ತದೆ. ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ 07 ಯೋಜನೆಗಳಿಗೆ 2023-24ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್ಲೈನ್ ಮೂಲಕ https://sevasindhu.karnataka.gov.in/Sevasindhu/DepartmentServicesKannada ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಡಿ.15 ರವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ವಿಕಲಚೇತನರು ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ 03 ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲ್ಲೂಕಿನ ರಾಜೇಶ್ 8073192914, ಸೋಮವಾರಪೇಟೆ ತಾಲ್ಲೂಕಿನ ಹರೀಶ್ ಟಿ.ಆರ್ 9008685129 ಹಾಗೂ ವಿರಾಜಪೇಟೆ ತಾಲ್ಲೂಕಿನ ಪ್ರಥನ್ ಕುಮಾರ್ ಸಿ.ಬಿ. 9900883654 ನ್ನು ಸಂಪರ್ಕಿಸುವಂತೆ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ. 08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Breaking News
- *ಕೊಡಗು ಪ್ರೆಸ್ ಕ್ಲಬ್ ನ ನೂತನ ಆಡಳಿತ ಮಂಡಳಿಯ ಪದಗ್ರಹಣ : ಅಧ್ಯಕ್ಷರಾಗಿ ಬೊಳ್ಳಜಿರ ಅಯ್ಯಪ್ಪ ಅಧಿಕಾರ ಸ್ವೀಕಾರ*
- *ವಿಜ್ರಂಭಣೆಯ ದಸರಾ ಆಚರಣೆಗೆ ಸಿದ್ಧತೆ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾನ ಆದ್ಯತೆ : ಶಾಸಕ ಡಾ.ಮಂತರ್ ಗೌಡ*
- *ಶೋಭಾಯಾತ್ರೆಯಲ್ಲಿ ವಿಜ್ರಂಭಿಸಿದ ಶಾಂತಿನಿಕೇತನದ ಶ್ರೀಮಹಾಗಣಪ*
- *ಶಾಸಕ ಡಾ.ಮಂತರ್ ಗೌಡ ಮಡಿಕೇರಿ ನಗರ ಸಂಚಾರ : ದಸರಾದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ*
- *ಉತ್ತಮ ಕಾರ್ಯನಿರ್ವಹಣೆಗಾಗಿ ಮದೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ*
- *ಆರ್.ಅಶೋಕ್ ವಿರುದ್ಧ ಕೊಡಗು ಐಎನ್ಟಿಯುಸಿ ಅಸಮಾಧಾನ*
- *ಡಿಸಿಸಿ ಬ್ಯಾಂಕ್ ನ 99 ನೇ ವಾರ್ಷಿಕ ಮಹಾಸಭೆ : ಕೃಷಿಕರಿಗೆ 5 ಲಕ್ಷ ರೂ. ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ : ರೂ.7.91 ಕೋಟಿ ಲಾಭ*
- *ಶ್ರೀಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*
- *ಗೆಜ್ಜೆ ಹಣಕೋಡು : ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ವಿಶೇಷ ಅಭಿಯಾನ*
- *ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ*