ವಿರಾಜಪೇಟೆ ನ.22 : ವಿರಾಜಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಶಾಸಕರ ಕಚೇರಿಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
ಈ ಹಿಂದೆ ಸರಕಾರ ಕೊಡಗಿನ ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡಿದ್ದರೂ ಇದುವರೆಗು ಜಿಲ್ಲಾಧಿಕಾರಿಗಳು ಜಾಗವನ್ನು ಮಾಜಿ ಸೈನಿಕರಿಗೆ ಹಸ್ತಾಂತಿಸಿರುವುದಿಲ್ಲ. ಈ ಸಂಬಂಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಾಜಿ ಸೈನಿಕರು ಶಾಸಕರಿಗೆ ಮನವಿ ಸಲ್ಲಿಸಿದರು.
ಸನ್ಮಾನ ಸ್ವಿಕರಿಸಿದ ಮಾತನಾಡಿದ ಶಾಸಕ ಪೊನ್ನಣ್ಣ, ಮಾಜಿ ಸೈನಿಕರಿಗೆ ಜಾಗದ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮೇ.ಜ. ಕಾರ್ಯಪ್ಪ, ಮೇ.ಚಿಂಗಪ್ಪ, ವಿರಾಜಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರಿಶ್, ಸಂಘದ ಸದಸ್ಯರಾದ ಕೊಂಗಂಡ ಭೀಮಯ್ಯ, ಪಟ್ರಪಂಡ ಕರುಂಬಯ್ಯ ಹಾಗೂ ಸೋಮೇಶ್, ತೊರೇರ ರಾಜ ಪೂವಯ್ಯ, ಸುಬ್ಬಯ್ಯ, ಮತ್ತು ಟಿ,ಶೆಟ್ಟಿಗೇರಿ ಸಂಘದ ಆಡಳಿತ ಮಂಡಳಿ ಸದಸ್ಯರು ಮನವಿ ನೀಡುವ ಸಂದರ್ಭ ಹಾಜರಿದ್ದರು.









