ಮಡಿಕೇರಿ ನ.23 : ಪ್ರಸಕ್ತ(2023-24) ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಮತ್ತು ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆಯಂತ್ರ, ಮರಗೆಲಸ ಮತ್ತು ಗಾರೆ ಕಸುಬಿನ ಸುಧಾರಿತ ಉಪಕರಣ ಪಡೆಯಲು ಆಸಕ್ತಿಯುಳ್ಳ ಗ್ರಾಮೀಣ ಪ್ರದೇಶದ ವೃತ್ತಿನಿರತ ಕಸುಬುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ದಾಖಲಾತಿಗಳೊಂದಿಗೆ https://kodagu.nic.in/en/application-for-free-toolkits-for-rural-artisans-during-the-year-2023-24/2023-24/ ವೆಬ್‍ಸೈಟ್‍ನಲ್ಲಿ ಡಿ.20 ರೊಳಗೆ ಅಪ್‍ಲೋಡ್ ಮಾಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ವೋಟರ್ ಐಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಪಡೆದ ಪ್ರಮಾಣ ಪತ್ರ(ಸರ್ಟಿಫಿಕೇಟ್ ಪ್ರಮ್ ಪಂಚಾಯತ್ ಡೆವಲೆಪ್‍ಮೆಂಟ್ ಆಫಿಸರ್(ಫಾರ ಟೈಲರಿಂಗ್, ಮೆಷಿನ್ ಮತ್ತು ಕಾರ್‍ಫೆಂಟರಿ) ದಾಖಲಾತಿಗಳನ್ನು ನೀಡುವುದು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು(ಗ್ರಾಮೀಣ ಕೈಗಾರಿಕೆ) ರವರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ ದೂ.ಸಂ.08272-228113 ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅರ್ಹತೆ:-ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆಯುವುದಕ್ಕಾಗಿ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷಗಳು ಇರತಕ್ಕದ್ದು.
ಗಾರೆಕೆಲಸ ಮತ್ತು ಮರಗೆಲಸ ಉಪಕರಣಗಳನ್ನು ಪಡೆಯುವುದಕ್ಕಾಗಿ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಗಾರೆಕೆಲಸ ಮತ್ತು ಮರಗೆಲಸ ಉಪಕರಣಗಳನ್ನು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 60 ವರ್ಷಗಳು ಇರತಕ್ಕದ್ದು. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರಿ ನೌಕರರು ಅಥವಾ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಈಗಾಗಲೇ ಉಚಿತ ಸುಧಾರಿತ ಉಪಕರಣ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ ಕೊಡಗು ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*