ಮಡಿಕೇರಿ ನ.23 : ವಿಶ್ವ ಹಿಂದು ಪರಿಷದ್ ವತಿಯಿಂದ ನ.26 ರಂದು ಭಾಗಮಂಡಲದಲ್ಲಿ ಕಾವೇರಿ ಆರತಿ ನಡೆಯಲಿದೆ.
ಸಂಜೆ 5 ಗಂಟೆಗೆ ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಭಜನೆ, ವೇದಘೋಷಗಳೊಂದಿಗೆ ಕಾವೇರಿ ತಾಯಿಗೆ ಕಾವೇರಿ ಆರತಿ ನೆರವೇರಲಿದೆ. ಮುಖ್ಯ ಭಾಷಣಕಾರರಾಗಿ ಸುವರ್ಣ ನ್ಯೂಸ್ ಚಾನಲ್ ನ ಸಂಪಾದಕ ಹಾಗೂ ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ಪಾಲ್ಗೊಳ್ಳಲಿದ್ದಾರೆ. ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಉಪಸ್ಥಿತರಿರುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತೆ ಕಾವೇರಿಗೆ ಆರತಿ ಬೆಳಗುವಂತೆ ವಿಶ್ವ ಹಿಂದು ಪರಿಷದ್ ನ ಕೊಡಗು ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.










