ಮಡಿಕೇರಿ ನ.23 : ವಿವಿಧ ಕ್ಷೇತ್ರಗಳಲ್ಲಿನ ಅಸಂಘಟಿತ ಕಾರ್ಮಿಕ ಸಮೂಹಕ್ಕೆ ಆರ್ಥಿಕ ಚೈತನ್ಯವನ್ನು ಒದಗಿಸುವ ಮೂಲಕ ರಾಷ್ಟ್ರಾಭ್ಯುದಯದ ಚಿಂತನೆಯಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ಸ್ವನಿಧಿಯಿಂದ ಪಿಎಂ ಸುರಕ್ಷಾ’ ಯೋಜನೆ ಸಮಾಜದ ತಳ ಹಂತದಲ್ಲಿರುವವರ ಆಶಾಕಿರಣವಾಗಿದೆ ಎಂದು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಮತ್ತು ವಿಶ್ವ ಕರ್ಮ ಯೋಜನೆಯ ರಾಜ್ಯ ಸಂಚಾಲಕರಾದ ಮಾಜಿ ಸಚಿವ ಎ.ರಾಮದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯೋಜನೆಯ ವಿವರಗಳನ್ನು ನೀಡಿದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ಬೀದಿ ಬದಿ ವ್ಯಾಪಾರಿಗಳ ನೆರವಿನ ಚಿಂತನಡಿಯಡಿ ರೂಪುಗೊಂಡ ಪಿಎಂ ಸ್ವನಿಧಿ ಯೋಜನೆಯಡಿ ಪ್ರಸ್ತುತ ಪತ್ರಿಕಾ ವಿತರಕರು, ವಿವಾಹ ಸಮಾರಂಭಗಳಲ್ಲಿ ಛಾಯಾಚಿತ್ರ ತೆರೆಯುವವರು, ವಿಡಿಯೋಗ್ರಾಫರ್ಗಳು, ಹಾಲು ವಿತರಕರು, ಹೂ ಕಟ್ಟುವವರು ಮತ್ತು ಮಾರುವವರು ಹೀಗೆ 23 ವಿವಿಧ ಕ್ಷೇತ್ರಗಳ ಅಸಂಘಟಿತರನ್ನು ಸೇರ್ಪಡೆಗೊಳಿಸಿ, ಅವರಿಗೆ ಯೋಜನೆಯ ನೆರವನ್ನು ವಿಸ್ತರಿಸಲಾಗಿದೆ ಎಂದರು.
ಸ್ವನಿಧಿ ಯೋಜನೆಯಡಿ ನೋಂದಾಯಿತ ಫಲಾನುಭವಿಗೆ ಮೊದಲ ಹಂತದಲ್ಲಿ 10ಸಾವಿರ, ಎರಡನೇ ಹಂತದಲ್ಲಿ 20 ಸಾವಿರ ರೂ., ಮೂರನೇ ಹಂvದಲ್ಲಿ 50ಸಾವಿರ ರೂ. ಮತ್ತು ನಾಲ್ಕನೇ ಹಂತದಲ್ಲಿ ಮುದ್ರಾ ಯೋಜನೆಯಡಿ 10ಲಕ್ಷದವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಮಂಜೂರು ಮಾಡಲಾಗುತ್ತದೆ. ಬಡ್ಡಿಯ ದರದಲ್ಲಿ ಶೇ. 7ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಬ್ಯಾಂಕ್ಗೆ ಭರಿಸುತ್ತದೆ ಎಂದು ಮಾಹಿತಿ ನೀಡಿದರು.
ಪಿಎಂ ಸ್ವನಿಧಿ ಯೋಜನೆಯಡಿ ಕೊಡಗಿನಲ್ಲಿ ಇಲ್ಲಿಯವರೆಗೆ 1776 ಮಂದಿಗೆ ನೆರವನ್ನು ಒದಗಿಸಲಾಗಿದೆ. ಪ್ರಸ್ತುತ ಜಿಲ್ಲೆಯ ಪಟ್ಟಣ ಪಂಚಾಯ್ತಿ ನಗರಸಭೆ ಸೇರಿದಂತೆ ಒಟ್ಟು ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ, ಸ್ವನಿಧಿ ಯೋಜನೆಯಡಿ ಬರುವ ಫಲಾನುಭವಿಗಳ ಸರ್ವೇ ನಡೆಸಿ, ಅರ್ಹ ಫಲಾನುಭವಿಗಳನ್ನು ಯೋಜನೆಗೆ ಒಳಪಡಿಸುವಂತೆ ಸೂಚಿಸಲಾಗಿದೆಯೆಂದು ರಾಮದಾಸ್ ತಿಳಿಸಿದರು.
ಪಿ.ಎಂ.ಸ್ವನಿಧಿ ಫಲಾನುಭವಿಗಳಿಗೆ ಪಿಎಂ ಸುರಕ್ಷಾ ಭೀಮಾ ಯೋಜನೆಯ ಅಡಿಯಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ 20ರೂ.ವಾರ್ಷಿಕ ಚಂದಾಕ್ಕೆ 2 ಲಕ್ಷ , ಅಪಘಾತದಿಂದ ಅಂಗವೈಕಲ್ಯತೆ ಒಳಗಾದಲ್ಲಿ 1 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಪಿ.ಎಂ.ಸುರಕ್ಷಾ ಜೀವನ ಜ್ಯೋತಿ ಯೋಜನೆ, ಪಿ.ಎಂ.ಜನನಿ ಸುರಕ್ಷಾ ಯೋಜನೆ, ಪಿ.ಎಂ. ಮಾತೃವಂದನಾ ಯೋಜನೆ, ಪಿ.ಎಂ.ಶ್ರಮಯೋಗಿ ಮನ್ಧನ್ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆಂದು ವಿವರಗಳನ್ನಿತ್ತರು.
ಪಿಎಂ ಸ್ವನಿಧಿ ಯೋಜನೆಯಡಿ ರಾಷ್ಟ್ರವ್ಯಾಪಿ 44 ಲಕ್ಷ ಕುಟುಂಬಗಳಿಗೆ ನೆರವನ್ನು ನೀಡಲಾಗಿದ್ದು, 8 ಲಕ್ಷ ಕೋಟಿ ರೂ.ಗಳ ಈ ಯೋಜನೆಯಡಿ 8 ಸಾವಿರ ಕೋಟಿ ರೂ.ಗಳನ್ನು ಪಿಎಂ ಸ್ವನಿಧಿಗೆ ಮೀಸಲಿರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಯೋಜನೆಯಡಿ 3.10 ಲಕ್ಷ ಜನರಿಗೆ 600 ಕೊಟಿ ರೂ.ಗಳ ನೆರವನ್ನು ಒದಗಿಸಲಾಗಿದೆ. ಆ ಮೂಲಕ ಯೋಜನೆ ಅನುಷ್ಟಾನದಲ್ಲಿ ರಾಜ್ಯ ಇಡೀ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಹುಟ್ಟಿದ ದಿನವಾದ ಸೆ.17 ರಂದು ‘ವಿಶ್ವ ಕರ್ಮ ಯೋಜನೆ’ ಜಾರಿಗೆ ಬಂದಿದೆ. ಇದು ಕೇವಲ ವಿಶ್ವ ಕರ್ಮ ಸಮಾಜಕ್ಕೆ ಸೀಮಿತವಾಗಿಲ್ಲ. ಬದಲಾಗಿ ಕೈ ಕೆಲಸಗಳಲ್ಲಿ ನಿರತರಾದ 18 ಸಮಾಜಗಳಿಗೆ ಯೋಜನೆ ಅನ್ವಯಿಸುತ್ತದೆ ಎಂದರು.
ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ಉದ್ಯೋಗಕ್ಕೆ ಸಂಬಂಧಿಸಿದಂತೆ ಭತ್ಯೆಯೊಂದಿಗೆ ಅಗತ್ಯ ತರಬೇತಿಯನ್ನು ನೀಡಿ, 15 ಸಾವಿರ ರೂ. ಮೌಲ್ಯದ ಟೂಲ್ ಕಿಟ್ ಒದಗಿಸಲಾಗುತ್ತದೆ. ಈ ಯೋಜನೆಯಡಿ ಹೆಸರನ್ನು ಪಿಎಂ ವಿಶ್ವಕರ್ಮ ಪೋರ್ಟಲ್ ಮೂಲಕ ಹೆಸರನ್ನು ನೋಂದಾಯಿಸಲು ಅವಕಾಶವನ್ನು ಒದಗಿಸಲಾಗಿದೆ ಎಂದು ಎ.ರಾಮದಾಸ್ ತಿಳಿಸಿದರು.
ಪಿಎಂ ಸ್ವನಿಧಿ ಯೋಜನೆಗಳನ್ನು ಆರಂಭಿಕ ಹಂತರಲ್ಲಿ ರಾಜ್ಯದ 18 ಜಿಲ್ಲೆಗಳಿಗೆ ಸೀಮಿತವಾಗಿ ಜಾರಿಗೆ ತರಲಾಗಿತ್ತು. ಆದರೆ ಡಿ.1 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳು ಇದರ ವ್ಯಾಪ್ತಿಗೆ ಒಳಪಡುತ್ತದೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಪಂಡ ಕಾಳಪ್ಪ ಹಾಗೂ ಹುಲ್ಲೂರಿಕೊಪ್ಪ ಮಾದಪ್ಪ ಉಪಸ್ಥಿತರಿದ್ದರು.
Breaking News
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*