ವಿರಾಜಪೇಟೆ ನ.23 : ಮೈಸೂರಿನಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಪ್ಸರ ಜಯನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರು ಕರಾಟೆ ಶಿಕ್ಷಕ ಎಂ.ಬಿ. ಚಂದ್ರನ್ ಅವರಲ್ಲಿ ತರಬೇತಿ ಮತ್ತು ಮಾರ್ಗದರ್ಶ ಪಡೆದಿದ್ದಾರೆ. ಶಾಲಾ ಸಂಯೋಜಕರಾದ ಅಮೃತ, ಶಿಕ್ಷಕಿ ಟಿ.ಜಿ.ಕಲ್ಪ ಹಾಜರಿದ್ದರು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿಗಳು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದರು.








