ಮಡಿಕೇರಿ ನ.24 : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ 2023-24ನೇ ಸಾಲಿಗೆ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಶ್ರೇಯಾಂಕದ ಆಧಾರದಲ್ಲಿ ನಡೆಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿಎಸ್ಸಿಯ ವಿದ್ಯಾರ್ಥಿನಿ ತೀರ್ಥ ತಂಗಮ್ಮ, ಉಪಾಧ್ಯಕ್ಷರಾಗಿ ಮಾನಸ ಪಿ. ಪಿ, ಕಾರ್ಯದರ್ಶಿಯಾಗಿ ಪುಷ್ಯ ಪೂವಮ್ಮ ಕೆ.ಎನ್, ಜಂಟಿ ಕಾರ್ಯದರ್ಶಿಯಾಗಿ ದ್ವಿತೀಯ ಬಿ ಎ ವಿಭಾಗದ ಮಹೇಂದ್ರ ಎನ್. ವಿ ಹಾಗೂ ದ್ವಿತೀಯ ಬಿ ಎಚ್ ಆರ್ ಡಿ ಯ ಅಲೀನಾ ಜಸ್ಮ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಬಿ ಎ ವಿಭಾಗದ ಅಭಿಷೇಕ್ ಎಂ.ಎಸ್ ಹಾಗೂ ಮಾನಸ ಬಿ.ಕೆ ಆಯ್ಕೆಯಾಗಿದ್ದಾರೆ. ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಘದ ಸಂಚಾಲಕರಾದ ತಳವಾರ್ ಬಿ.ಎಚ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅವರ ನೇತೃತ್ವದಲ್ಲಿ ಅಧ್ಯಾಪಕರ ಸಹಕಾರದೊಂದಿಗೆ ಚುನಾವಣೆ ನಡೆಸಲಾಯಿತು. ತರಗತಿ ಪ್ರತಿನಿಧಿಗಳು ತಮ್ಮ ಮತಗಳನ್ನು ಮತಪೆಟ್ಟಿಗೆಗೆ ಹಾಕುವ ಮೂಲಕ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಕಾಲೇಜಿನ ಐಕ್ಯೂಎಸ್ ಸಿ ಸಂಚಾಲಕ ಡಾ.ರಾಜೇಂದ್ರ ಆರ್ , ಅರ್ಥಶಾಸ್ತ್ರ ಪ್ರೊ. ತಿಪ್ಪೇಸ್ವಾಮಿ, ಹಿಂದಿ ವಿಭಾಗದ ಡಾ. ಶ್ರೀಧರ್ ಹೆಗ್ಡೆ, ಅರ್ಥಶಾಸ್ತ್ರ ವಿಭಾಗದ ಡಾ. ರೇಣುಶ್ರೀ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರಮೇಶ್, ಇಂಗ್ಲೀಷ್ ಸ್ನಾತಕೋತ್ತರ ವಿಭಾಗದ ಸಂಯೋಜಕ ಪೂಣಚ್ಚ, ಅತಿಥಿ ಉಪನ್ಯಾಸಕರಾದ ರಾಜೀವ್ ಪಿ, ಖುರ್ಪಿದಾ ಬಾನು, ಡೀನಾ, ಮೋನಿಕಾ, ಪ್ರದೀಪ್ ಹಾಗೂ ಕಾಂಚನ ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.










