ಮಡಿಕೇರಿ ನ.24 : ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದಿಂದ ಉದ್ದೇಶಿತ ಕೆಮಿಸ್ಟ್ ಭವನಕ್ಕೆ ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಹೇಳಿದ್ದಾರೆ.
ನಗರದ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್ ನಲ್ಲಿ ಸಂಘದ 24 ನೇ ವಾಷಿ೯ಕ ಮಹಾಸಭೆಯಲ್ಲಿ ಮಾತನಾಡಿದ ಜೀವನ್, ನಗರದ ಚೇನ್ ಗೇಟ್ ಬಳಿಯಲ್ಲಿನ ಸಂಘದ ನಿವೇಶನದಲ್ಲಿ ಸುಸಜ್ಜಿತವಾಗಿ 60 ಲಕ್ಷ ರು. ವೆಚ್ಚದಲ್ಲಿ ಕೆಮಿಸ್ಟ್ ಭವನ ನಿಮಾ೯ಣ ಮಾಡಲಾಗುತ್ತದೆ. ಮುಂದಿನ ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧೆಡೆ 260 ಔಷಧಿ ವ್ಯಾಪಾರಿಗಳಿದ್ದಾರೆ. ಹೊಸ ಸದಸ್ಯರು ಸಂಘಕ್ಕೆ ಸೇಪ೯ಡೆಯಾಗುತ್ತಿದ್ದಾರೆ. ಜಿಲ್ಲಾ ಸಂಘದಿಂದ ರಾಜ್ಯ ಸಂಘದಲ್ಲಿಯೂ ನಿದೇ೯ಶಕರಾಗಿ ಕಾಯ೯ನಿವ೯ಹಿಸುವ ಮೂಲಕ ಕೊಡಗಿನ ಔಷಧಿ ವ್ಯಾಪಾರಿಗಳು ಗಮನ ಸೆಳೆದಿದ್ದಾರೆ ಎಂದು ಜೀವನ್ ಹಷ೯ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಕಾನೂನು ಸಲಹೆಗಾರ ಹರೀಶ್ ಮಾತನಾಡಿ, ಕೇಂದ್ರ ಸಕಾ೯ರ ಔಷಧಿ ರಂಗದಲ್ಲಿ ನಾನಾ ಬದಲಾವಣೆ ತರುತ್ತಿದೆ. ಶೀಘ್ರದಲ್ಲಿಯೇ 1948 ರ ಔಷಧಿ ಸಂಬಂಧಿತ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿ ಜಾರಿಯಾದಲ್ಲಿ, ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ. ಫಾಮ೯ಸಿ ಕಾಲೇಜುಗಳ ನಿಯಂತ್ರಣ ರಾಷ್ಟ್ರೀಯ ಮಟ್ಟದಲ್ಲಿಯೇ ನಡೆಯುವಂತಾಗುತ್ತದೆ. ಅಂತೆಯೇ ಫಾಮ೯ಸಿ ಕಮಿಷನ್ ಎಂಬ ನೂತನ ಸಂಸ್ಥೆಯು ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದ್ದು, ಈವರೆಗೆ ಅಸ್ತಿತ್ವದಲ್ಲಿದ್ದ ಫಾಮ೯ಸಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಕೆಲವು ಸಂಸ್ಥೆಗಳನ್ನು ರದ್ದುಗೊಳಿಸಲಾಗುತ್ತದೆ ಎಂದರು.
ಈ ಸಂಬಂಧಿತ ಇಂಧೋರ್ ನಲ್ಲಿ ಡಿಸೆಂಬರ್ 15 ರಂದು ಮಹತ್ವದ ಸಭೆ ನಡೆಯಲಿದೆ. ಹಳೇ ನಿಯಮಗಳು ಬದಲಾಗಿ ಹೊಸ ನಿಯಮಗಳು ಜಾರಿಯಾದಾಗ ಔಷಧಿ ವ್ಯಾಪಾರಿಗಳು ಈ ಬಗ್ಗೆ ಹೊಂದಿಕೊಳ್ಳುವ ಅನಿವಾಯ೯ತೆ ಎದುರಾಗಲಿದೆ ಎಂದು ಹೇಳಿದ ಹರೀಶ್, ತಾಲೂಕು ದಂಡಾಧಿಕಾರಿಗೂ ಕೂಡ ಔಷಧಿ ಮಳಿಗೆಗಳ ಪರಿಶೀಲನೆಗೆ ಕಾನೂನುಬದ್ದ ಅಧಿಕಾರ ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.
ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಸಂಘದ ಜಿಲ್ಲಾ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ , ಉಪಾಧ್ಯಕ್ಷರಾದ ಅಂಬೆಕಲ್ ವಿನೋದ್, ಸಂಪತ್ ಕುಮಾರ್, ಕೖಷ್ಣಪ್ಪ, ಸಂಘಟನಾ ಕಾಯ೯ದಶಿ೯ ಶ್ರೀನಿವಾಸ್, ಖಜಾಂಜಿ ಪ್ರಸಾದ್ ಗೌಡ, ಸಂಘಟನಾ ಕಾಯ೯ದಶಿ೯ ಕೆ.ವಸಂತ್ ಕುಮಾರ್ ವೇದಿಕೆಯಲ್ಲಿದ್ದರು.









