ಕುಶಾಲನಗರ ನ.28 : ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯ ನಿವಾಸಿಗಳು ಜತೆಗೂಡಿ ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ಬೃಂದಾವನ ಬಡಾವಣೆಯಲ್ಲಿ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಹುತ್ತರಿ ಹಬ್ಬ ಆಚರಣೆಯು ಭಾವೈಕ್ಯತೆಯನ್ನು ಪ್ರತಿಬಿಂಬಿಸಿತು.
ಕಳೆದ 10 ವರ್ಷಗಳಿಂದ ಬಡಾವಣೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ರೀತಿಯ ಹಬ್ಬ ಹರಿದಿನಗಳು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಬಡಾವಣೆಯ ನಿವಾಸಿ ಮೇಲ ಮನೆ ಎಂ.ಎನ್.ಕಾಳಪ್ಪ ಅವರ ಮನೆಯಲ್ಲಿ ನೆರೆಕಟ್ಟಿದ ನಂತರ ಮೆರವಣಿಗೆಯಲ್ಲಿ ಎಂ.ಎನ್.ಕಾಳಪ್ಪ ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು.
ಅರಳಿ, ಮಾವು, ಹಲಸು, ಕುಂಬಳಿ, ಗೋಡಂಬಿ ಗಿಡಗಳ ಎಲೆಗಳನ್ನು ಬಳಸಿ `ನೆರೆ ಕಟ್ಟುವ’ ವಿಧಿ ವಿಧಾನದ ಮೂಲಕ ಹುತ್ತರಿ ಆಚರಣೆಗೆ ಸದಸ್ಯರು ಪೂಜೆ ಸಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳ ನಂತರ, ಸದಸ್ಯರು ‘ದುಡಿಕೋಟ್ಪಟ’ದೊಂದಿಗೆ ಗದ್ದೆಗೆ ಮೆರವಣಿಗೆ ನಡೆಸಿದರು.
ಸಾಂಪ್ರದಾಯಿಕ ಉಡುಗೆ – ತೊಡುಗೆಯೊಂದಿಗೆ ಭತ್ತದ ಗದ್ದೆಯಲ್ಲಿ ತೆರಳಿ ಗದ್ದೆಯಲ್ಲಿ ಬೆಳೆದಿದ್ದ ಕದಿರನ್ನು ಕೊಯ್ದು ಅಲ್ಲಿಂದ ಪ್ರತಿಯೊಬ್ಬರ ಕೈಯಲ್ಲಿ ಭತ್ತದ ಕದಿರನ್ನು ಹಿಡಿದು ಮನೆಗಳತ್ತ ಸಾಗಿದರು.
ಎಂ.ಎನ್.ಕಾಳಪ್ಪ ಅವರ ಮನೆಯಂಗಳಕ್ಕೆ ಕದಿರನ್ನು ತಂದು ಮನೆಯೊಳಗೆ ಈ ಮುಂಚೆ ಸಿದ್ಧ ಮಾಡಿದ ನೆರೆ ಕಟ್ಟಿದ ಆ ಕಂತೆಗಳ ಜತೆಯಲ್ಲಿ ಕದಿರನ್ನು ಸೇರಿಸಿ ಹಬ್ಬಕ್ಕೆ ಬಂದಿದ್ದ ಎಲ್ಲಾ ಕುಟುಂಬಗಳ ಹಿರಿಯರಿಗೆ ಕದಿರು ವಿತರಣೆ ಮಾಡಲಾಯಿತು. ಈ ಕದಿರನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಭಕ್ತಿ ಮತ್ತು ಶ್ರದ್ಧೆಯಿಂದ ಮನೆಯಲ್ಲಿರುವ ಮನೆಯ ಹಿರಿಬಾಗಿಲು ಆಯುಧ, ಯಂತ್ರ, ಅಡುಗೆ ಮನೆ ಮತ್ತು ವಾಹನಗಳಿಗೆ ಆ ಕದಿರನ್ನು ಕಟ್ಟುವ ಮೂಲಕ ಸಾಂಪ್ರದಾಯಿಕ ಆಚರಣೆ ಮಾಡಲಾಯಿತು.
ಸಾಂಪ್ರದಾಯಿಕವಾದ ನೃತ್ಯ ಹಾಗೂ ಹಾಡು ಹೇಳುವ ಮೂಲಕ ಸಂಭ್ರಮಿಸಿದರು. ಬೃಂದಾವನ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆ ನಿವಾಸಿಗಳು ಹಾಗೂ ನೆಂಟರಿಷ್ಟರು,ಪುರುಷರು ಮತ್ತು ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಜತೆಗೆ ಹೊಸ ಅಕ್ಕಿಯೊಂದಿಗೆ ಸಿದ್ಧಗೊಳಿಸಿದ ಖಾದ್ಯಗಳನ್ನು ಉಣಬಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಹುತ್ತರಿ ಹಬ್ಬದ ಸಂಘಟಕ ಎಂ.ಎನ್.ಕಾಳಪ್ಪ ನಮ್ಮ ಬಡಾವಣೆಯಲ್ಲಿ ಕಳೆದ 10 ವರ್ಷಗಳಿಂದ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಬಡಾವಣೆಯ ಎಲ್ಲಾ ನಿವಾಸಿಗಳು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ನಾವು ಎಲ್ಲರೂ ಪ್ರೀತಿ- ವಿಶ್ವಾಸದಿಂದ ಹಬ್ಬವನ್ನು ಆಚರಿಸುವ ಮೂಲಕ ಸುಗ್ಗಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಎಂದರು.
ನಮ್ಮ ಬಡಾವಣೆಯಲ್ಲಿ ಕೈಲು ಮುಹೂರ್ತ, ಪುತ್ತರಿ ಹಬ್ಬ ಸೇರಿದಂತೆ ಎಲ್ಲಾ ಹಬ್ಬಗಳನ್ನು ಬಡಾವಣೆಯ ಎಲ್ಲಾ ನಿವಾಸಿಗಳು ಜತೆಗೂಡಿ ಆಚರಿಸುತ್ತಿದ್ದೇವೆ ಎಂದು ನಿವಾಸಿ ಕೂಡಕಂಡಿ ಸೋಮಪ್ಪ ಹೇಳಿದರು.
ಹುತ್ತರಿ ಉತ್ಸವದಲ್ಲಿ ಹಿರಿಯ ಸಹಕಾರಿ ಧುರೀಣ ಎಂ.ಎನ್.ಕುಮಾರಪ್ಪ, ಆರ್ ಪಿ. ಲಕ್ಷ್ಮಣ್, ಬಡಾವಣೆಯ ಪ್ರಮುಖರಾದ ಹಂಡ್ರಂಗಿ ಜೆ.ನಾಗರಾಜ್, ಜಿ.ಬಿ.ಪೂವಯ್ಯ, ಉಮಾದೇವಿ, ಮಹೇಂದ್ರ, ಜಗನ್ನಾಥ್, ಶ್ರೀನಿವಾಸ್, ವನಿತ, ರಾಣಿ, ಲಲಿತಾ, ಮೀನಾಕ್ಷಿ, ಜಯ ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*