ಮಡಿಕೇರಿ ನ.29 : ಕ್ರೀಡೆಯಲ್ಲಿರುವ ಅಂಶಗಳನ್ನು ವೃತ್ತಿಯಲ್ಲಿಯೂ ಸೇರಿಸಿಕೊಂಡರೆ ಉತ್ತಮ ಕೆಲಸಗಳನ್ನು ನಮ್ಮಿಂದ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಮತ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಪೊಲೀಸರಿಗೆ ಕ್ರೀಡೆ ಎಂಬುದು ಅವಿಭಾಜ್ಯ ಅಂಗದಂತೆ. ಕ್ರೀಡೆಯಿಂದ ಶಿಸ್ತು, ಸಂಯಮ ಜೊತೆಗೆ ಬದ್ಧತೆ, ಸಮಸ್ವಯತೆಯೂ ಇರುತ್ತದೆ. ಪೊಲೀಸರು ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳುವುದರಿಂದ ಕೆಲಸಗಳು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಹೇಳಿದರು.
ಕ್ರೀಡಾಕೂಟಗಳ ಆಯೋಜನೆಯಿಂದ ನಮ್ಮ ನಡುವೆ ಒಗ್ಗಟ್ಟು ಮೂಡಿ ಸಮನ್ವಯತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ವೃತ್ತಿ ತಂಡವಾಗಿ ಮಾಡುವ ಕೆಲಸವಾಗಿದ್ದು, ಇದನ್ನು ಅರಿತು ಸಿಬ್ಬಂದಿಗಳು ಪರಸ್ಪರ ಕೈಜೋಡಿಸಿ ಕಾರ್ಯೋನ್ಮುಖಗೊಳ್ಳಬೇಕು. ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ನಿತ್ಯ ಕ್ರೀಡಾಚಟುವಟಿಕೆಯಲ್ಲಿರುತ್ತದೆ. ಪೊಲೀಸರು ಕೂಡ ದಿನದ ಕೆಲಸಮಯ ಕ್ರೀಡೆಗೆಂದು ಮೀಸಲಿಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪ್ರತಿವರ್ಷ ಪೊಲೀಸ್ ಕ್ರೀಡಾಕೂಟದ ಮೂಲಕ ಒಂದಾಗಲು ವೇದಿಕೆ ಸೃಷ್ಟಿಯಾಗುತ್ತದೆ. 3 ದಿನಗಳ ಕಾಲ ನಡೆಯುವ ಕಾರ್ಯಕ್ರಮದಿಂದ ಪೊಲೀಸ್ ಕುಟುಂಬದ ಸಮ್ಮಿಲನವಾಗುತ್ತದೆ. ಮನೋಲ್ಲಾಸದಿಂದ ವೃತ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸದಸ್ಯ ಅರುಣ್ ಶೆಟ್ಟಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೇಕಲ್ಲು ನವೀನ್ ಕುಶಾಲಪ್ಪ, ನಗರಾಧ್ಯಕ್ಷ ಧನಂಜಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಎಲ್.ದಿವಾಕರ್, ಡಿವೈಎಸ್‍ಪಿಗಳಾದ ಜಗದೀಶ್, ಗಂಗಾಧರಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ಕಳೆದ ವರ್ಷದ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಹೆಚ್.ಎಸ್.ಸಂಜು ಕ್ರೀಡಾಜ್ಯೋತಿ ತಂದರು.
ಪಂದ್ಯಾವಳಿಯಲ್ಲಿ ಕೊಡಗು ವಿಶೇಷ ಘಟಕ, ಡಿ.ಎ.ಆರ್. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಉಪವಿಭಾಗ, ಮಹಿಳಾ ಪೊಲೀಸ್ ಘಟಕದ ಸಿಬ್ಬಂದಿಗಳ ತಂಡಗಳು ಭಾಗವಹಿಸುತ್ತಿವೆ.
ಕ್ರೀಡಾಕೂಟದ ಮೊದಲ ದಿನ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ 800 ಮೀ ಹಾಗೂ 200 ಮೀ ಓಟ, ಪುರುಷರಿಗೆ ಲಾಂಗ್ ಜಂಪ್, ಶಾಟ್‍ಪೂಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೊ, ಮಹಿಳೆಯರಿಗೆ ವೇಗದ ನಡಿಗೆ ಸೇರಿದಂತೆ ಇನ್ನಿತರ ಅಥ್ಲೆಟಿಕ್ ಪಂದ್ಯಾವಳಿಗಳು, ಥ್ರೋಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ನಡೆದವು.
ನ.30 ರಂದು ಶೂಟಿಂಗ್, ಅಥ್ಲೆಟಿಕ್ಸ್, ಹಗ್ಗಜಗ್ಗಾಟ, ಕ್ರಿಕೆಟ್ ನಡೆಯಲಿದ್ದು, ಕ್ರೀಡೆಯೊಂದಿಗೆ ಪೊಲೀಸರ ಮಕ್ಕಳಿಗೆ ಮನರಂಜನಾ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿ ಕಾರ್ಯಕ್ರಮದ ಮೆರಗಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
Breaking News
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*