ಬಾಳೆಲೆ ನ.30 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪುಷ್ಪರ್ಚನೆ ಮಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಯನ್.ಕೆ.ಪ್ರಭು ಪ್ರಾಸ್ತಾವಿಕ ಮಾತನಾಡಿ, ಕನಕದಾಸರಿಗೆ ಶ್ರೀ ಶ್ರೀ ಕೃಷ್ಣನ ಮೇಲೆ ಇದ್ದ ಅಪಾರ ಭಕ್ತಿ ಮತ್ತು ಪ್ರೀತಿಯ ಬಗ್ಗೆ ವಿವರಿಸಿ, ಉಡುಪಿ ಶ್ರೀಕೃಷ್ಣ ದೇವಾಲಯದ ಕಥೆಯನ್ನು ಹೇಳಿದರು.
ನಂತರ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿ, ದಾಸ ಸಾಹಿತ್ಯ ದ ಮೂಲಕ ಜಾತಿ, ಮತ, ಕುಲಗಳ ಬೇಧ, ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮಹಾನ್ ಸಂತ ಕನಕದಾಸರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶಿಕ್ಷಕರಾದ ಪಡಿಞರಂಡ ಪ್ರಭು ಕುಮಾರ್, ಸುಬ್ಬಯ್ಯ, ಬೆಂಡಿಕ್ಟಪರ್ನಾಡಿಸ್, ಉಪನ್ಯಾಸಕರಾದ ಪವಿ ಬೋಧಕೇತರ ಸಿಬ್ಬಂದಿಗಳಾದ ಮಮತಾ, ಸುರೇಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರಾದ ತಿಮ್ಮರಾಜು ಸ್ವಾಗತಿಸಿ, ನಿರೂಪಿಸಿದರು.