ಸುಂಟಿಕೊಪ್ಪ,ನ.30: ಗುಣಮಟ್ಟದ ಕಾಮಗಾರಿ ನಡೆಸz ಕಳೆಪೆ ಕಾಮಗಾರಿ ನಡೆಸಿ ಕೈತೊಳೆದುಕೊಂಡರೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಡಾ.ಮಂತರ್ ಗೌಡ ಎಚ್ಚರಿಕೆ ನೀಡಿದರು.
ಮಾದಾಪುರ ಗ್ರಾ.ಪಂ ಕುಂಬೂರು ಹಾಗೂ ಮಾದಾಪುರ ರಾಜ್ಯ ಹೆದ್ದಾರಿ ಬಳಿ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು ಜನರ ಆಶೋತ್ತರಗಳನ್ನು ಹಂತ ಹಂತವಾಗಿ ನೇರವೇರಿಸಲಾಗುವುದೆಂದರು.
ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರು, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿದ್ದು, ಜನರ ಸಮಸ್ಯೆ ಪರಿಹಾರಕ್ಕೆ ತಕ್ಷಣ ವೈದ್ಯರ ನೇಮಕ ಮಾಡಬೇಕೆಂದು ಇದೇ ಸಂದರ್ಭ ಶಾಸಕರಿಗೆ ಮನವಿ ಸಲ್ಲಿಸಿದರು.
ಸ್ಥಳದಲ್ಲೇ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಕರೆ ಮಾಡಿದ ಶಾಸಕರು, ತಕ್ಷಣವೇ ವೈದ್ಯರ ನೇಮಕ ಮಾಡುವಂತೆ ಸೂಚಿಸಿದರು.
ಮಾದಾಪುರ ಗ್ರಾ.ಪಂ ಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನೇಮಕವಾಗದೆ ಸಮಸ್ಯೆಯಾಗಿದೆ ಎಂದು ಅಧ್ಯಕ್ಷ ಮನುಬಿದ್ದಪ್ಪ ಹಾಗೂ ಸದಸ್ಯರುಗಳು ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾದಾಪುರ ಗ್ರಾ. ಪಂಚಾಯಿಒತಿ ಅಧ್ಯಕ್ಷ ಮನುಬಿದ್ದಪ್ಪ, ಉಪಾಧ್ಯಕ್ಷ ಸುರೇಶಬಾವೆ, ಸದಸ್ಯರುಗಳಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ ತಂಗಚ್ಚ, ಸೋಮಣ್ಣ, ಕೆ.ಶೀಲ ಮಾನಸ,ನಿರೂಪ, ಜ್ಯೋತಿ, ಪಿ.ಡಿಓ ಸುರೇಶ, ಸೋಮವಾರಪೇಟೆ ತಾಲೂಕು ಬ್ಲಾಕ್ ಅಧ್ಯಕ್ಷ ಜಿ.ಜಿ.ಸತೀಶ, ಮಾದಾಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ದಾದು ಬೋಪಯ್ಯ, ಕುಂಬೂರು ಗ್ರಾಮದ ಅಧ್ಯಕ್ಷ ಸುಂದರ, ಮಾದಾಪುರ ಕಾಂಗ್ರೆಸ್ ಮುಖಂಡ ಮೇದೂರ ಹರೀಶ, ಎ.ಬಿ.ಉಮ್ಮರ್, ಮಜೀದ್, ಮಾಜಿ ಉಪಾಧ್ಯಕ್ಷರು ಅಣ್ಣಾ, ಇಬ್ರಾಹಿಂ ಹಾಜರಿದ್ದರು.
ಮಾದಾಪುರ ಗ್ರಾ.ಪಂ. ಕಟ್ಟಡದ ಹಿಂಭಾಗದ ಬರೆ ಕುಸಿಯುತ್ತಿತ್ತು. ತಡೆಗೋಡೆ ನಿರ್ಮಿಸಿ ಕೊಡಲು ಕೆ.ಎ.ಲತೀಫ್ ಶಾಸಕರಿಗೆ ಮನವಿ ಸಲ್ಲಿಸಿದ್ದರು.