ಮಡಿಕೇರಿ ನ.30 : ಪ್ರಣಾಮ್ ಭಾರತ ವತಿಯಿಂದ ಡಿ.3 ರಂದು ಮಡಿಕೇರಿಯಲ್ಲಿ ಹಾಸ್ಯ ಸಂಜೆ ಎಂಬ “ಸ್ಟ್ಯಾಂಡ್ ಅಪ್ ಕಾಮಿಡಿ” ವಿನೂತನ ಕಾರ್ಯಕ್ರಮ ನಡೆಯಲಿದೆ.
ನಗರದ ಭಾರತೀಯ ವಿದ್ಯಾಭವನದ ಸಂಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಭಾರದ್ವಾಜ ಆನಂದತೀರ್ಥ, ಮಕ್ಕಳ ತಜ್ಞ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ರೇಡಿಯೋ ಎಫ್ ಎಮ್ ಖ್ಯಾತಿಯ ಆರ್ಜೆ ತ್ರಿಶೂಲ್ ಕಂಬಳ, ಡಿಜಿಟಲ್ ಮಾರ್ಕೆಟಿಂಗ್ ತಜ್ಞ ರಿತೇಶ್ ನೂಜಿಬೈಲು, ಕಾರ್ಯಕ್ರಮ ನಿರೂಪಕಿ ಅಕ್ಷತಾ ಶೆಟ್ಟಿ, ಯುವ ಪ್ರತಿಭೆ ಅಬ್ದುಲ್ ಕೌಸರ್ ವೀಕ್ಷಕರನ್ನು ನಗಿಸುವ ಹೊಣೆ ಹೊತ್ತಿದ್ದಾರೆ.
ಇದು ಇಡೀ ಕುಟುಂಬದವರು ಒಟ್ಟಾಗಿ ಕುಳಿತು ರಂಜನೆಯನ್ನು ಪಡೆಯಬಹುದಾದ ಹಾಸ್ಯ ಕಾರ್ಯಕ್ರಮಮವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಮನವಿ ಮಾಡಿದ್ದಾರೆ. ಟಿಕೆಟ್ ಕಾಯ್ದಿರಿಸಲು ಆಸಕ್ತರು 9380869836 ಸಂಖ್ಯೆಗೆ ಕರೆ ಮಾಡಲು ಕೋರಿಕೊಳ್ಳಲಾಗಿದೆ.









