ಕಡಂಗ ನ.30 : ವಿರಾಜಪೇಟೆ ವಲಯದ ಎಸ್ ಎಸ್ ಎಫ್ ಸಾಹಿತ್ಯೋತ್ಸವ ಕಾರ್ಯಕ್ರಮವು ಡಿ.2 ಮತ್ತು 3 ರಂದು ವಿರಾಜಪೇಟೆಯ ಗುಂಡಿಗೆರೆಯಲ್ಲಿ ನಡೆಯಲಿದ್ದು, ಅದರ ಕರಪತ್ರವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆಗೊಳಿಸಿದರು.
ಈ ಸಂದರ್ಭ ಎಸ್‍ಎಸ್‍ಎಫ್ ಪ್ರಮುಖರಾದ ಮತೀನ್, ತಿಮ್ಮಯ್ಯ,ರಾಫಿ,ಸುಫ್ಯಾನ್ ಅನ್ವಾರಿ, ಸಿಹಾಬುದ್ದೀನ್ ಜೌಹರಿ,ತ್ವಾಹಿರ್ ಹಾಜರಿದ್ದರು.
ವಿರಾಜಪೇಟೆ ವಲಯಕ್ಕೆ ಒಳಗೊಂಡ ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.
ಡಿ.2 ರಂದು ರಾತ್ರಿ ಇಶಾಲ್ ನೈಟ್ ಕಾರ್ಯಕರ್ಮ ನೆಡೆಯಲಿವೆ. ದುಆ ಕಾರ್ಯಕ್ರಮ ಕ್ಕೆ ಸಯ್ಯದ್ ಸಿದಿ ಅಲ್ ಅಹಸನಿ ಮತ್ತು ಸಯ್ಯದ್ ಮಹದಿ ಲತೀಫಿ ನೇತೃತ್ವವಹಿಸಲಿದ್ದಾರೆ.
ಕಾರ್ಯಕಮಕ್ಕೆ ಅತಿಥಿಗಳಾಗಿ ಆಶ್ರಫ್ ಅಹಸನಿ , ಗುಂಡಿಗೆರೆ ಜಮಾಹತ್ ಖತೀಬ್ ಇಲ್ಲ್ಯಾಸ್ ಅಮ್ಜದಿ , ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ, ರಂಜಿಪೂಣಚ್ಚ , ಡಿ.ಎಚ್.ಎಸ್ ಸೂಫಿ ಹಾಜಿ, ರಾಫಿ ವಿರಾಜಪೇಟೆ , ಹನೀಫ ಚೋಕಂಡಳ್ಳಿ , ರಫೀಕ್ ಕೊಮ್ಮೆತೊಡು, ಮತೀನ್ ಭಾಗವಹಿಸಲಿದ್ದಾರೆ.
ವರದಿ : ನೌಫಲ್ ಕಡಂಗ









