Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*
  • *ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*
  • *ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*
  • *ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*
  • *ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*
  •  *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*
  • *ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*
  • *ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*
  • *ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*
  • *ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಲೋಕಸಭಾ ಚುನಾವಣೆ ಬಂತೆಂದು ಸಂಸದರು ಕೊಡಗಿಗೆ ಬಂದಿದ್ದಾರೆ : ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಟೀಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಲೋಕಸಭಾ ಚುನಾವಣೆ ಬಂತೆಂದು ಸಂಸದರು ಕೊಡಗಿಗೆ ಬಂದಿದ್ದಾರೆ : ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಟೀಕೆ*

ನವೆಂಬರ್ 30, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.30 : ಇಷ್ಟು ದಿನ ಕೊಡಗಿನಲ್ಲಿ ಕಾಣಿಸಿಕೊಳ್ಳದೇ ಇದ್ದ ಸಂಸದ ಪ್ರತಾಪ್ ಸಿಂಹ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೆ ಸುಳ್ಳುಗಳನ್ನು ಹೇಳಿ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಷ್ಟೇ ಕೊಡಗಿನ ಕಡೆ ಮುಖ ಮಾಡುವ ಪ್ರತಾಪ್ ಸಿಂಹ ಅವರು ಪ್ರಧಾನಿ ‘ಮೋದಿ’ ಕೃಪಾ ಕಟಾಕ್ಷದಲ್ಲಿ ಗೆಲ್ಲುವ ವ್ಯಕ್ತಿಯಾಗಿದ್ದಾರೆ. ಸುಳ್ಳುಗಳನ್ನು ಹೇಳುತ್ತಾ, ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ.ಗಳನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಂಸದರು ಮತ್ತೆ ಸುಳ್ಳುಗಳನ್ನು ಹರಿ ಬಿಟ್ಟಿದ್ದಾರೆ. ವಿಧಾನಸಭಾ ಚುನಾವಣೆಯ ಹಂತದಲ್ಲಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಘೋಷಿಸಿದ ಕೊಡವ ಅಭಿವೃದ್ಧಿ ನಿಗಮಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲವೆಂದು ಧರ್ಮಜ ಉತ್ತಪ್ಪ ಸ್ಪಷ್ಟಪಡಿಸಿದರು.
ಈ ಹಿಂದಿನ ಸಮ್ಮಿಶ್ರ ಸರ್ಕಾರ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಕೊಡವ ಸಮಾಜಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಗಾಗಿ 10 ಕೋಟಿ ರೂ. ಹಣ ಬಿಡುಗಡೆಯಾಗಿರುವುದು ನಿಜ. ಆದರೆ, ಅದು ಕೊಡವ ಅಭಿವೃದ್ಧಿ ನಿಗಮಕ್ಕೆ ಸಂಬAಧಿಸಿದ್ದಲ್ಲ. ನಿಗಮ ಸ್ಥಾಪನೆಗೂ ವರ್ಷದ ಹಿಂದೆಯೇ ಬಿಡುಗಡೆಯಾಗಿದ್ದ, ಈ ಹಣಕ್ಕೆ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನಿಷ್ಟ ಕ್ರಿಯಾಯೋಜನೆಯನ್ನು ಮಾಡುವ ಪ್ರಯತವನ್ನು ಕೂಡ ಮಾಡಿಲ್ಲ.
ಅಂದು ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಬಿಡುಗಡೆಯಾದ 10 ಕೋಟಿ ರೂ. ಅನುದಾನದ ಬಳಕೆಗೆ ಸಂಸದರು ಯಾಕೆ ಮುಂದಾಗಿರಲಿಲ್ಲವೆAದು ಪ್ರಶ್ನಿಸಿದ ಅವರು, ಅಂದು ಆ ಹಣ ಮರಳಿ ಸರ್ಕಾರಕ್ಕೆ ಹೋಗದಂತೆ ಅದನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇಡಲಾಗಿದೆ. ಹೀಗಿದ್ದು ಪದೇ ಪದೇ ನಿಗಮಕ್ಕೆ ಹಣ ಬಿಡುಗಡೆಯಾಗಿದೆ ಎಂದು ಸಂಸದರು ಸುಳ್ಳುಗಳನ್ನು ಹೆಣೆಯುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲ ಸಮಯಗಳ ಹಿಂದೆ ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಇದೇ ಮಾತನ್ನು ಸಂಸದರು ಆಡಿದ ಸಂದರ್ಭ, ಅಲ್ಲಿ ಉಪಸ್ಥಿತರಿದ್ದ ಶಾಸಕ ಎ.ಎಸ್.ಪೊನ್ನಣ್ಣ ಅವರು, ನಿಗಮಕ್ಕೆ ಹಣ ಬಿಡುಗಡೆಯಾಗದೇ ಇರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸಂಸದರು ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ. ಜಿಲ್ಲೆಯ ಶಾಸಕರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರ ಘೋಷಿಸಿದ ಕೊಡವ ಅಬಿವೃದ್ಧಿ ನಿಗಮವನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಶೀಘ್ರವೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
::: ನೀವೇನು ಮಾಡುತ್ತಿದ್ದಿರಿ? :::
ಕೊಡವರು ಹಾಗೂ ಜಮ್ಮಾದಾರರಿಗೆ ಕೋವಿ ಹೊಂದಿಕೊಳ್ಳುವ ಹಕ್ಕನ್ನು 1965 ರ ಸಶಸ್ತç ಕಾಯ್ದೆಯಡಿ ಸ್ಪಷ್ಟಪಡಿಸಲಾಗಿದೆ. ಹೀಗಿದ್ದೂ 2015 ರಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆ ಹಂತದಲ್ಲಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು, ಸಮಸ್ಯೆಯನ್ನು ಬಗೆಹರಿಸಲು ಯಾಕೆ ಮುಂದಾಗಿಲ್ಲ ಎಂದು ಧರ್ಮಜ ಉತ್ತಪ್ಪ ಪ್ರಶ್ನಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮಜ ಉತ್ತಪ್ಪ, ಇದೇ ರೀತಿಯ ಮಾತನ್ನು ವಿಧಾನಸಭಾ ಚುನಾವಣೆ ಸಂದರ್ಭವೂ ಸಂಸದರು ಆಡಿದ್ದರು. ಲೋಕಸಭಾ ಚುನಾವಣೆೆಯಲ್ಲಿ ಜನತೆಯೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಕೊಡಗಿನಲ್ಲಿ ಮಾತ್ರವಲ್ಲ ಮೈಸೂರು ವಿಭಾಗದ ಜನತೆಗೂ ಸಂಸದರು ಏನೆಂದು ಅರಿವಿಗೆ ಬಂದಿದೆ ಎಂದು ಹೇಳಿದರು.
::: ನಿಷ್ಟ್ರಿಯ ಸಂಸದರು :::
ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಕೇಂದ್ರ ವಾಣಿಜ್ಯ ಮಂತ್ರಾಲಯಕ್ಕೆ ಒಳಪಡುವ ಕಾಫಿ ಕೃಷಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮತ್ತು ಪ್ರಧಾನಮಂತ್ರಿಗಳ ನಿಧಿಯ ಅನುದಾನವನ್ನು ಕಾಫಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳುವಲ್ಲಿ ಪ್ರತಾಪ ಸಿಂಹ ಸೋತಿದ್ದಾರೆ. ಇವರು ನಿಷ್ಟ್ರಿಯ ಸಂಸದರೆಂದು ಟೀಕಿಸಿದರು.
ಕೊಡಗಿನ ರೈಲ್ವೆ ಸಂಪರ್ಕ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಂದಿನ ಚುನಾವಣೆಗೆ ನಾಮಪತ್ರ ಸಲ್ಲಿಸುವುದಿಲ್ಲವೆಂದು ಹೇಳಿಕೊಂಡಿದ್ದರು, ಇದೀಗ ರೈಲು ಎಲ್ಲಿದೆಯೆಂದು ಸಂಕೇತ್ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ವಿ.ಕೆ.ಸತೀಶ್ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಆ.30 : ರಕ್ಷಾ ಬಂಧನ ಹಬ್ಬವು ಪುರಾಣ ಕಾಲದಿಂದಲೂ ಸಹೋದರತೆಯ ಸಂಕೇತವಾಗಿ ಅಣ್ಣ ತಂಗಿಯ ಮಧುರ…

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*

ಆಗಷ್ಟ್ 30, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*

ಆಗಷ್ಟ್ 30, 2026

 *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*

ಆಗಷ್ಟ್ 30, 2026

*ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*

ಆಗಷ್ಟ್ 30, 2026

*ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*

ಆಗಷ್ಟ್ 30, 2026

*ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*

ಆಗಷ್ಟ್ 30, 2026

*ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*

ಆಗಷ್ಟ್ 30, 2026

*ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ಸಂಘಕ್ಕೆ ರೂ.35.20 ಲಕ್ಷ ಲಾಭ : ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನ ವಿತರಣೆ*

ಆಗಷ್ಟ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.