ಮಡಿಕೇರಿ ಡಿ.1 : ಮಡಿಕೇರಿಯಲ್ಲಿ ಡಿ.2 ಮತ್ತು 3 ರಂದು ಎರಡು ದಿನಗಳ ಕಾಲ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶತಪವ೯ ಹೆಸರಿನ ಜಿಲ್ಲಾ ಸಮ್ಮೇಳನ ಆಯೋಜಿತವಾಗಿದ್ದು 8 ಕಂದಾಯ ಜಿಲ್ಲೆಗಳಿಗೆ ಸೇರಿದ ಕ್ಲಬ್ ಗಳ ಅಂದಾಜು 600 ಸದಸ್ಯೆಯರು ಪಾಲ್ಗೊಳ್ಳಲಿದ್ದಾರೆ ಎಂದು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಪೂಣಿ೯ಮಾ ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಪೂಣಿ೯ಮಾ ರವಿ, ಡಿ.2 ರಂದು ಸಂಜೆ 4 ಗಂಟೆಗೆ ನಗರದ ಕ್ರಿಸ್ಟಲ್ ಕೋಟ್೯ ಸಭಾಂಗಣದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿದೇ೯ಶಕಿ ಅನುರಾಧ ಪ್ರಕಾಶ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷೆ ಡಾ.ವಿಮಲ ರಾಧಾಕೖಷ್ಣ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇನ್ನರ್ ವೀಲ್ ಜಿಲ್ಲೆ ಕೊಡಗೂ ಸೇರಿದಂತೆ ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಜಿಲ್ಲೆಗಳನ್ನು ಒಳಗೊಂಡಿದ್ದು 51 ಕ್ಲಬ್ ಗಳಿಂದ ಈ ಜಿಲ್ಲೆಯಲ್ಲಿ1833 ಸದಸ್ಯೆಯರಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಿಂದ ಈವರೆಗೆ ವಿನ್ನಿ ಬೋಪಯ್ಯ, ಪ್ರೇಮಕಾಳಪ್ಪ ಅವರುಗಳು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆಯಾಗಿದ್ದು ಕೊಡಗಿನಿಂದ ಮೂರನೇ ಜಿಲ್ಲಾಧ್ಯಕ್ಷೆಯಾಗಿ ಕಾಯ೯ನಿವ೯ಹಿಸುತ್ತಿರುವ ತಾನು ಕೊಡಗಿನಲ್ಲಿ ನಡೆಯುತ್ತಿರುವ ಎರಡನೇ ಜಿಲ್ಲಾ ಸಮ್ಮೇಳನದ ಯಶಸ್ವಿಗೆ ತಂಡದೊಂದಿಗೆ ಕಾಯ೯ಪ್ರವೖತ್ತರಾಗಿರುವುದಾಗಿ ಪೂಣಿ೯ಮಾ ರವಿ ತಿಳಿಸಿದರು.
50 ವಷ೯ಗಳನ್ನು ಪೂರೈಸುತ್ತಿರುವ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದಲ್ಲಿ ಮಹಿಳೆಯರ ಉತ್ಹಾನ್ನಗಳು , ಮಹಿಳೆಯರಿಗಾಗಿನ ವಿವಿಧ ಮಳಿಗೆಗಳು ತೆರೆಯಲ್ಪಡುತ್ತದೆ. ಸಾಂಸ್ಕೖತಿಕ ಕಾಯ೯ಕ್ರಮಗಳೂ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿದ ಪೂಣಿ೯ಮಾ ರವಿ, ಸಮ್ಮೇಳನ ಸಂದಭ೯ ಜಿಲ್ಲಾ ಇನ್ನರ್ ವೀಲ್ ವತಿಯಿಂದ 100 ಸೈಕಲ್ ಗಳನ್ನು ಬಾಲಕಿಯರಿಗೆ ವಿತರಿಸಲಾಗುವ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಮ್ಯಾನ್ಟರ್ ದೇಶದಲ್ಲಿ ಪ್ರಾರಂಭವಾದ ಇನ್ನರ್ ವೀಲ್ ಸಂಸ್ಥೆಯು ಇದೀಗ ಶತಮಾನೋತ್ಸವ ಆಚರಿಸುತ್ತಿರುವ ಸಂದಭ೯ ಮಡಿಕೇರಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆ ತಂದಿದೆ ಎಂದು ನುಡಿದ ಪೂಣಿ೯ಮಾ ರವಿ, ವಿಶ್ವದಲ್ಲಿಯೇ ಮಹಿಳೆಯರ ಅತ್ಯಂತ ದೊಡ್ಡ ಸಂಘಟನೆ ಎಂಬ ಖ್ಯಾತಿ ಹೊಂದಿರುವ ಇನ್ನರ್ ವೀಲ್ ಜಗತ್ತಿನಾದ್ಯಂತ 100 ದೇಶಗಳ ಮೂಲಕ 4 ಸಾವಿರ ಕ್ಲಬ್ ಗಳಿಂದ 1.20 ಲಕ್ಷ ಸದಸ್ಯೆಯರನ್ನು ಹೊಂದಿದೆ. ಭಾರತದಲ್ಲಿ 27 ಜಿಲ್ಲೆಗಳಿಂದ 55 ಸದಸ್ಯೆಯರನ್ನು ಇನ್ನರ್ ವೀಲ್ ಹೊಂದಿದೆ ಎಂದು ಮಾಹಿತಿ ನೀಡಿದರು.
ಬಾಲಕಿಯರಿಗೆ ಸೂಕ್ತ ಶಿಕ್ಷಣ, ಉದ್ಯೋಗ ನೀಡಿಕೆ, ಸ್ವಚ್ಚ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅನೇಕ ಸೌಕಯ೯ಗಳನ್ನು ಇನ್ನರ್ ವೀಲ್ ಸಂಸ್ಥೆಯು ನೀಡುತ್ತಾ ಬಂದಿದ್ದು ತನ್ನ ಜಿಲ್ಲೆಯಲ್ಲಿ ಈ ವಷ೯ 64.80 ಲಕ್ಷ ಮೌಲ್ಯದ 941 ಯೋಜನೆಗಳ ಮೂಲಕ 3.92 ಲಕ್ಷ ಮಹಿಳೆಯರಿಗೆ ಅನುಕೂಲ ನೀಡಲಾಗಿದೆ ಎಂದೂ ಪೂಣಿ೯ಮಾ ರವಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಕನ್ನು ದೇವರಾಜ್, ಕಾಯ೯ದಶಿ೯ ದಿವ್ಯಾಮುತ್ತಣ್ಣ, ಸಮ್ಮೇಳನ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಸಹಅಧ್ಯಕ್ಷೆ ಶಫಾಲಿ ರೈ, ಖಜಾಂಜಿ ಲಕ್ಷ್ಮಿ ಈಶ್ವರ ಭಟ್ ಉಪಸ್ಥಿತರಿದ್ದರು.