ಮಡಿಕೇರಿ ಡಿ.1 : ಮೈಸೂರಿನ ಹೆಸರಾಂತ ಅಪೋಲೊ ಬಿ.ಜಿ.ಎಸ್ ಆಸ್ಪತ್ರೆ ಹಾಗೂ ಗೋಣಿಕೊಪ್ಪದ ಲೋಪಾಮುದ್ರಾ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಚರಿಸಲಿರುವ ಅತ್ಯಾಧುನಿಕ ಆಂಬ್ಯುಲೆನ್ಸ್ ಅನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ, ಹೃದಯಾಘಾತವಾದ ತಕ್ಷಣ ತುರ್ತು ನೀಡಬೇಕಾದ ಪ್ರಥಮ ಹಂತದ ಜೌಷಧಿಯ ವ್ಯವಸ್ಥೆಯನ್ನು ಬಡ ರೋಗಿಗಳಿಗೆ ದಿವಂಗತ ಎ.ಕೆ.ಸುಬ್ಬಯ್ಯ ಮತ್ತು ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋಣಿಕೊಪ್ಪದ ಲೋಪಾಮುದ್ರಾ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು.
ಈಸಂದರ್ಭ ಗೋಣಿಕೊಪ್ಪದ ಲೋಪಾಮುದ್ರಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸೌಮ್ಯ ಗಣೇಶ್ ನಾಣಯ್ಯ, ಲೋಪಾಮುದ್ರಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಅಮೃತ್ ನಾಣಯ್ಯ , ಲೋಪಾಮುದ್ರಾ ಆಸ್ಪತ್ರೆ ಅಧ್ಯಕ್ಷ ಕ್ಯಾಪ್ಟನ್ ಮಾದಪ್ಪ, ಡಾ.ಅಮಾನ್ ಮೆಡಿಕಲ್ ಸುಪರಿಡೆಂಟ್ ಅಪೋಲೊ ಬಿ.ಜಿ.ಎಸ್ ಆಸ್ಪತ್ರೆ , ಸಮಾಜ ಸೇವಕ ಸಂಕೇತ್ ಪೂವಯ್ಯ , ಅಪೋಲೊ ಬಿ.ಜಿ.ಎಸ್ ಆಸ್ಪತ್ರೆ ಸೀನಿಯರ್ ಎಕ್ಸ್ ಕ್ಯೂಟಿವ್ ರಾಕೇಶ್ ಉತ್ತಪ್ಪ ಸೇರಿದಂತೆ ಲೋಪಾಮುದ್ರಾ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.
ಲೋಕಾರ್ಪಣೆ ಗೊಂಡ ಅತ್ಯಾಧುನಿಕ 5ಜಿ ಆಂಬ್ಯುಲೆನ್ಸ್ ನಲ್ಲಿ ಹೃದಯಕ್ಕೆ ಸಂಬಂಧಿಸಿದ ವೈದ್ಯರ ನಿರಂತರ ಸಂಪರ್ಕದೊಂದಿಗೆ ರೋಗಿಯ ಜೀವ ಉಳಿಸುವಂತಹ ಯಂತ್ರೋಪಕರಣಗಳು ಲಭ್ಯವಿರಲಿದೆ.