ಮಡಿಕೇರಿ ಡಿ.1 : ಪೊನ್ನಂಪೇಟೆಯ ಕೂರ್ಗ್ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಬೆಳ್ಳಿಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಅನ್ವೇಷಣೆ – 2 ಎಂಬ ಪ್ರಾಜೆಕ್ಟ್ ಪ್ರದರ್ಶನ ಸ್ಪರ್ಧೆಯನ್ನು ಡಿ.15 ರಂದು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಸಂಶೋಧನಾ ಪ್ರವೃತ್ತಿಯನ್ನು ಹಾಗೂ ವೈನೋದಿಕ ಚಿಂತನಾ ಶೀಲತೆ ,ವಿನೂತನ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಈಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು ಮೂರು ವಿಭಾಗದಲ್ಲಿ ಜರುಗಲಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಪರಿಸರ ವಿಜ್ಞಾನ ಎಂಬ ಎರಡು ಪ್ರಕಾರದಲ್ಲಿ ಸ್ಪರ್ಧೆ ನಡೆಯಲ್ಲಿದ್ದು, ಪ್ರಥಮ ಬಹುಮಾನ 8 ಸಾವಿರ ನಗದು, ದ್ವಿತೀಯ ಬಹುಮಾನ 6 ಸಾವಿರ ನಗದು ಮತ್ತು ತೃತೀಯ ಬಹುಮಾನ 4 ಸಾವಿರ ನಗದನ್ನು ಒಳಗೊಂಡಿದೆ.
ಪಿ.ಯು.ಸಿ.ವಿಭಾಗದ ಸ್ಪರ್ಧೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಮೂರು ವಿಷಯದಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ 10,000 ನಗದು ಮತ್ತು ದ್ವಿತೀಯ ಬಹುಮಾನ 6000 ನಗದ್ದನ್ನು ಒಳಗೊಂಡಿದೆ. ಈ ಬಹುಮಾನ ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿರುತ್ತದೆ.
ಡಿಪ್ಲೋಮೊ ವಿಭಾಗದ ಸ್ಪರ್ಧೆಯಲ್ಲಿ ಕಂಪ್ಯೂಟರ್ರ್ಸೈನ್ಸ್ ಆಂಡ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ಇಂಜನಿಯರಿಂಗ್ ವಿಭಾಗದ ವಿಷಯಾಧಾರಿತ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯೂ ಸಹ ಪ್ರತ್ಯೇಕ ವಿಭಾಗಗಳಲ್ಲಿ ಬಹುಮಾನವನ್ನು ಹೊಂದಿದೆ. ಪ್ರಥಮ ಬಹುಮಾನ 10,000 ಮತ್ತು ದ್ವಿತೀಯ ಬಹುಮಾನ 6000 ನಗದನ್ನು ಒಳಗೊಂಡಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.5 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜೊತೆಗೆ ನೋಂದಣಿ ಶುಲ್ಕ ಪ್ರತಿ ತಂಡಕ್ಕೆ 300 ರೂಪಾಯಿಯಾಗಿರುತ್ತದೆ. ಒಂದು ತಂಡದಲ್ಲಿ ಗರಿಷ್ಠ 4 ವಿದ್ಯಾರ್ಥಿಗಳು ಭಾಗವಹಿಸಬಹುದು. ಹಾಗೆಯೇ ಒಂದು ಕಾಲೇಜಿನಿಂದ ಗರಿಷ್ಠ 3 ತಂಡ ಭಾಗವಹಿಸಬಹುದಾಗಿದೆ.