ವಿರಾಜಪೇಟೆ ಡಿ.4 : ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾ. ಎಂ.ವಿ.ಪ್ರಾಂಜಲ್ ಅವರಿಗೆ ಎಸ್‍ಎಂಎಸ್ ವಿದ್ಯಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಗೌರವ ನಮನ ಸಲ್ಲಿಸಲಾಯಿತು.
ಎಸ್‍ಎಂಎಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟೊ, ಸ್ಕೌಟ್ ಶಿಕ್ಷಕ ಭೀಮಯ್ಯ ಕೆ.ಎಸ್, ಗೈಡ್ ಕ್ಯಾ.ಮೈಥಿಲಿ ರಾವ್, ಎನ್‍ಸಿಸಿ ಅಧಿಕಾರಿ ಲವ ಕುಮಾರ್, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕ್ಯಾ. ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕ್ಯಾಂಡಲ್ ದೀಪವನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಎಂಎಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟೊ, ಹುತಾತ್ಮರ ಕುಟುಂಬಕ್ಕೆ ದುಃಖವನ್ನ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ದೇಶಕ್ಕೋಸ್ಕರ ತನ್ನ ಪ್ರಾಣ ತ್ಯಾಗ ಮಾಡಿದಂತಹ ಇಂಥವರ ಹೆಸರು ಅಮರವಾಗಿರಲಿದೆ. ಪ್ರತಿಯೊಬ್ಬರು ದೇಶದ ಮೇಲೆ ಅಭಿಮಾನ ಶಿಸ್ತು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು.








