ಕಡಂಗ ಡಿ.4 : ಬೆಂಗೂರು ಗ್ರಾ.ಪಂ ವ್ಯಾಪ್ತಿಯ ಚೇರಂಬಾಣೆ ಯ ವಿವಿಧ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.
ಚೇರಂಬಾಣೆಯ ಅರುಣಾ ಪದವಿ ಪೂರ್ವ ಕಾಲೇಜಿನ ದ್ವಾರದ ಮುಂಭಾಗದಿಂದ ತೋಮಸ್ ಮನೆಯವರೆಗಿನ ರಸ್ತೆ, ಮಸೀದಿ ರಸ್ತೆ, ಪಟ್ಟಮಾಡ ಸತ್ಯ ಮನೆಯ ಮುಂಭಾಗದ ರಸ್ತೆ ಸೇರಿಸಿ ಒಟ್ಟು 10 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ವಿಜೇತರಿಗೆ ಬಹುಮಾನ ವಿತರಣೆ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಪಂಚಾಯಿತಿ ಅಧ್ಯಕ್ಷೆ ಮಿಲನ್ ಮುತ್ತಣ್ಣ, ವಾರ್ಡಿನ ಸದಸ್ಯರುಗಳಾದ ಕೆ.ಎಂ. ಬಶೀರ್, ಕೆ.ಕೆ.ಬಿಂದು, ಬಿ.ಜಿ.ಸೋಮಣ್ಣ , ವಲಯ ಅಧ್ಯಕ್ಷ ಕುಂಚೆಟ್ಟಿರ ರಮೇಶ್, ಪಕ್ಷದ ಹಿರಿಯರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.
ವರದಿ : ನೌಫಲ್ ಕಡಂಗ








