ಮಡಿಕೇರಿ ಡಿ.4 : ಕುಶಾಲನಗರದ ಸಂತ ಸೆಬಾಸ್ಟಿಯನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪೂರ್ವ ಸಿದ್ಧತೆಯಾಗಿ ಪ್ರಾರಂಭಿಸಲಾಗುವ ಕ್ರಿಸ್ಮಸ್ ಕಾರೋಲ್ಸ್ ಗೆ ಧರ್ಮ ಕೇಂದ್ರದ ಗುರು ಫಾದರ್ ಮಾರ್ಟಿನ್ ಚಾಲನೆ ನೀಡಿದರು.
ಕ್ರೈಸ್ತ ಬಾಂಧವರು ಮನೆ ಮನೆಗೆ ತೆರಳಿ ಕ್ರಿಸ್ಮಸ್ ಸಂದೇಶ ಸಾರುವ ಗೀತೆಗಳನ್ನು ಹಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಕಾನ್ವೆಂಟ್ ಸಿಸ್ಟರ್ಸ್ ತೆರೇಸಾ, ಸಲಹಾ ಸಮಿತಿಯ ಕಾರ್ಯದರ್ಶಿ ಸೆವ್ರಿನ್ ಡಿಸೋಜ, ಸಲಹಾ ಸಮಿತಿ ಸದಸ್ಯರಾದ ಶಾಜನ್ , ಯುವಕ ಸಂಘದ ಅಧ್ಯಕ್ಷ ರಾಬಿನ್, ಖಜಾಂಚಿ ರೋಷನ್ ವಿ. ಪಿ , ಕಾರ್ಯದರ್ಶಿ ರಾಕೇಶ್, ಐಸಾಕ್ ಸಾಲಿ, ಡೇರನ್, ಆಕಾಶ್, ರೋಷನ್ ಪೌಲ್ ಸಂತೋಷ್ ಮೆಲ್ವಿನ್ ಹಾಗೂ ಮಕ್ಕಳೂ ಪಾಲ್ಗೊಂಡಿದ್ದರು.








