ಸುಂಟಿಕೊಪ್ಪ ಡಿ.6 : ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಧ್ಯಕ್ಷರಾಗಿ ಬಿ.ಎಂ.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವಾಲಯದ ಆವರಣದಲ್ಲಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ನೇಮಕಗೊಳಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಎ.ಬಾಲಕೃಷ್ಣ, ಮುತ್ತಯ್ಯ, ಸುರೇಶ್ಗೋಪಿ, ಟಿ.ಜಿ.ರಾಧಾಕೃಷ್ಣ, ಉಪಾಧ್ಯಕ್ಷರಾಗಿ ಎಂ.ಮಂಜುನಾಥ್, ಬಿ.ಎ.ಪುನೀತ್, ಬಿ.ಕೆ.ಪ್ರಶಾಂತ್ಕುಮಾರ್, ಕೆ.ರವಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಚಂದ್ರ ನೇಮಕೊಂಡಿದ್ದಾರೆ.
ಖಜಾಂಜಿಯಾಗಿ ಎಂ.ಆರ್.ಶಶಿಕುಮಾರ್, ಸಹ ಕಾರ್ಯದರ್ಶಿಯಾಗಿ ವಿ.ಕೆ.ರಾಜು, ಕೆ.ಕನಿಸ್, ಮಣಿಕಂಠ, ಸಂಘಟನಾ ಕಾರ್ಯದರ್ಶಿಯಾಗಿ ಪೃಥ್ವಿರಾಜ್, ಶೇಖರ್ (ಅಣ್ಣು), ಕೆ.ಕೆ.ವಾಸುದೇವ, ಡಿ.ಕೆ.ರಾಕೇಶ್, ಎಂ.ಉದಯ, ಸಿ.ಸಿ.ಸುನಿಲ್, ಸಲಹಾ ಸಮಿತಿ ಸದಸ್ಯರುಗಳಾಗಿ ವಿ.ಎ.ಸಂತೋಷ್, ಧನುಕಾವೇರಪ್ಪ, ದೀನು ದೇವಯ್ಯ, ಪಿ.ಲೋಕೇಶ್, ಎ.ಶ್ರೀಧರ್ ಕುಮಾರ್, ಅನೂಪ್, ಎ.ಶ್ರೀಧರ್, ಸಿ.ಬಿ.ಚಂದ್ರಶೇಖರ್, ಎಂ.ಆರ್.ಶಿವಮಣಿ (ಶಿವರಾಂ) ನೇಮಕಗೊಂಡಿದ್ದು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಸಿ.ಪರುಷೋತ್ತಮ್, ಬಿ.ವಿ.ಸಜಿತ್, ಉಮೇಶ್, ಬಿ.ಆರ್.ಸತೀಶ್, ಬಸವರಾಜ್, ದೊರೆ, ಆರ್.ವಿಜಯ, ಚಂದ್ರ ಹಾಗೂ ಬಿ.ಕೆ.ದಿನೇಶ್ ಅವರನ್ನು ಆಯ್ಕೆ ಮಾಡಲಾಗಿದೆ.