ಮಡಿಕೇರಿ ಡಿ.12 : ಸಮಾಜಸೇವೆ ಮೂಲಕ ಸಮಾಜದಲ್ಲಿ ನಾವು ಶಾಶ್ವತವಾಗಿ ಸ್ಮರಣೀಯರಾಗಲು ಸಾಧ್ಯ ಇದೆ ಎಂದು ಮಡಿಕೇರಿಯ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾಯ೯ಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ವಲಯ 6 ರ ಸಾಂಸ್ಕೃತಿಕ ಸ್ಪಧೆ೯ ಕಲಾಪವ೯ವನ್ನು ಉದ್ಘಾಟಿಸಿ ಮಾತನಾಡಿದ ಅವರು,, ಸಾಮಾಜಿಕ ಬದಲಾವಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ, ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ ,ಬಾಬಾ ಆಮ್ಟೆ, ಮಥರ್ ಥೆರೆಸಾ, ಸ್ವಾಮಿ ವಿವೇಕಾನಂದ ಅವರಂಥ ಅನೇಕ ಮಹಾನೀಯರು ಪ್ರತೀಯೋವ೯ರ ಜೀವನದ ಆದಶ೯ವಾಗಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಚಳವಳಿಗಳ ಮೂಲಕ ದೇಶವನ್ನು ಸುಭದ್ರಗೊಳಿಸುವಲ್ಲಿ ಸಾಕಷ್ಟು ಮಹನೀಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ಮಹನೀಯರ ಜೀವನಾದಶ೯ಗಳನ್ನು ವಿದ್ಯಾಥಿ೯ ದಿಸೆಯಲ್ಲಿಯೇ ಹೇಳಿಕೊಡಬೇಕೆಂದು ಅನಿಸಿಕೆ ವ್ಯಕ್ತಪಡಿಸಿದ ಮೇಜರ್ ಡಾ. ಬಿ.ರಾಘವ, ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಶಿಕ್ಷಣ, ಆರೋಗ್ಯ, ನೈಮ್ಯ೯ಲ್ಯ, ಪರಿಸರ ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಯೋಜನೆ ರೂಪಿಸಿದ್ದು, ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಶ್ವತವಾಗಿ ನಮ್ಮನ್ನು ಸಮಾಜದ ಜನತೆ ಸ್ಮರಣೆ ಮಾಡಿಕೊಳ್ಳುವಂತಾಗಬೇಕಾದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಕ್ಕೆ ಕೊಡುಗೆ ನೀಡುವಂಥ ಕಾಯ೯ ಮಾಡಲು ಮುಂದಾಗಬೇಕೆಂದೂ ಅವರು ಸಲಹೆ ನೀಡಿದರು.
ಕಾಲೇಜು ಮುಂದಿನ ವರ್ಷ 75 ವರ್ಷ ಪೂರೈಸುತ್ತಿದ್ದು, ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ಕೋರಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, 12 ವಷ೯ಗಳ ಬಳಿಕ ರೋಟರಿ ಮಿಸ್ಟಿ ಹಿಲ್ಸ್ ವಲಯ 6 ರ 14 ರೋಟರಿ ಸಂಸ್ಥೆಗಳ ಸದಸ್ಯರು, ಕುಟುಂಬದವರಿಗಾಗಿ ಸಾಂಸ್ಕೃತಿಕ ಸ್ಪಧೆ೯ ಆಯೋಜಿಸುತ್ತಿದೆ. 200 ಕ್ಕೂ ಅಧಿಕ ಸದಸ್ಯರು ಈ ಬಾರಿ ಸಾಂಸ್ಕೃತಿಕ ಸ್ಪಧೆ೯ಗಳಲ್ಲಿ ಪಾಲ್ಗೊಂಡಿದ್ದಾರೆ. ರೋಟರಿ ಪರಿವಾರದ ಕಲಾಪ್ರತಿಭೆ ಗುರುತಿಸಲು ಸಾಂಸ್ಕೃತಿಕ ಸ್ಪಧೆ೯ಗಳು ಸಹಕಾರಿಯಾಗಿದೆ ಎಂದರು.
ವೇದಿಕೆಯಲ್ಲಿ ರೋಟರಿ ವಲಯ 6 ರ ಸಹಾಯಕ ಗವನ೯ರ್ ಗಳಾದ ದೇವಣಿರ ತಿಲಕ್, ಸತ್ಯನಾರಾಯಣ, ಲಿಖಿತ್, ವಲಯ ಸೇನಾನಿಗಳಾದ ಎಸ್.ಎಸ್.ಸಂಪತ್ ಕುಮಾರ್, ಮಾಚಯ್ಯ, ವಲಯ 6 ರ ಸಾಂಸ್ಕೃತಿಕ ಸಮಿತಿ ಸಹಸಂಚಾಲಕ ಆದಿತ್ಯ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜೆ.ಕೆ.ಸುಬಾಷಿಣಿ, ರೋಟರಿ ಮಿಸ್ಟಿ ಹಿಲ್ಸ್ ನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಶಂಕರ್ ಪೂಜಾರಿ ಉಪಸ್ಥಿತರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಎಚ್.ಟಿ. ನಿರೂಪಿಸಿ, ಕಾಯ೯ದಶಿ೯ ರತ್ನಾಕರ್ ರೈ ವಂದಿಸಿದರು.
ಕಲಾಪವ೯ ಬಹುಮಾನ ವಿಜೇತರ ವಿವರ ::
ಸಮೂಹ ನೃತ್ಯ ಸ್ಪಧೆ೯ : ವಿರಾಜಪೇಟೆ ರೋಟರಿ (ಪ್ರಥಮ), ಗೋಣಿಕೊಪ್ಪ ರೋಟರಿ (ದ್ವಿತೀಯ)
ಸಮೂಹ ಗಾಯನ ಸ್ಪಧೆ೯ : ವಿರಾಜಪೇಟೆ ರೋಟರಿ (ಪ್ರಥಮ), ಮಡಿಕೇರಿ ರೋಟರಿ ವುಡ್ಸ್ (ದ್ವಿತೀಯ), ಗೋಣಿಕೊಪ್ಪ ರೋಟರಿ (ತೃತೀಯ )
14 ವಷ೯ದೊಳಗಿನ ನೃತ್ಯ ಸ್ಪಧೆ೯ – ಅನೂಹ್ಯ ರವಿಶಂಖರ್ (ಪ್ರಥಮ), ದೖತಿ ಪೂಜಾರಿ (ದ್ವಿತೀಯ), ನವನಿಕ (ತೃತೀಯ)
ಕಿರುನಾಟಕ ಸ್ಪಧೆ೯ : ಹುಣಸೂರು ರೋಟರಿ (ಪ್ರಥಮ), ಗೋಣಿಕೊಪ್ಪ ರೋಟರಿ (ದ್ವಿತೀಯ), ವಿರಾಜಪೇಟೆ ರೋಟರಿ (ತೃತೀಯ)
ಸ್ಟಾಂಡ್ ಅಪ್ ಕಾಮಿಡಿ : ಬಸವರಾಜ್ ಹುಣಸೂರು (ಪ್ರಥಮ), ಬಿ.ಜಿ. ಅನಂತಶಯನ (ದ್ವಿತೀಯ), ಆದಿತ್ಯ ವಿರಾಜಪೇಟೆ (ತೃತೀಯ)
14 ರಿಂದ 18 ವಷ೯ದೊಳಗಿನ ವಿಭಾಗದ ನೖತ್ಯ ಸ್ಪಧೆ೯ – ಪ್ರಗತಿ (ಪ್ರಥಮ), ಮುಕ್ತರಂಜಿತ್ (ದ್ವಿತೀಯ), ರಕ್ಷಾ (ತೃತೀಯ),
14 ವಷ೯ದೊಳಗಿನ ವಿಭಾಗದ ಗಾಯನ ಸ್ಪಧೆ೯ : ಇಶಾನಿ ಭರತ್ ರೈ (ಪ್ರಥಮ), ಶವ೯ರಿ ಕಿರಣ್ ರೈ (ದ್ವಿತೀಯ), ಸಮೇದಾ ರಾವ್ (ತೃತೀಯ)
ಮಹಿಳೆಯರಿಗಾಗಿನ ಗಾಯನ ಸ್ಪಧೆ೯ : ಪ್ರಮೀಳಾ ಶೆಟ್ಟಿ (ಪ್ರಥಮ), ಸುಮಿ ಸುಬ್ಬಯ್ಯ (ದ್ವಿತೀಯ), ಕಾವ್ಯಶ್ರೀ ಕಪಿಲ್ (ತೃತೀಯ)
14 ರಿಂದ 18 ವಷ೯ದೊಳಗಿನ ವಿಭಾಗದ ಗಾಯನ ಸ್ಪಧೆ೯ : ಪ್ರಗತಿ (ಪ್ರಥಮ), ಭಾಂಧವ್ಯ (ದ್ವಿತೀಯ), ಪ್ರಚೋದಯ ( ತೃತೀಯ)
ಪುರುಷರಿಗಾಗಿನ ಗಾಯನ ಸ್ಪಧೆ೯ : ಶ್ರೀಹರಿ ರಾವ್ (ಪ್ರಥಮ), ರಾಜೀವ್ (ದ್ವಿತೀಯ), ಸಿ.ಎನ್. ವಿಜಯ್ (ತೃತೀಯ)
ಡ್ಯುಯೆಟ್ ಗಾಯನ ಸ್ಪಧೆ೯ : ರವಿಕುಮಾರ್ – ಪ್ರಮಿಳಾ ಶೆಟ್ಟಿ (ಪ್ರಥಮ), ರತ್ನಾಕರ್ ರೈ – ನಮಿತಾ ರೈ (ದ್ವಿತೀಯ), ಆದಿತ್ಯ – ಭಾಂಧವ್ಯ (ತೃತೀಯ)
ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಬಿ.ಜಿ.ಅನಂತಶಯನ, ಮೋಹನ್ ಪ್ರಭು ಬಹುಮಾನ ವಿತರಣಾ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ಅನಿಲ್ ಎಚ್.ಟಿ ಮತ್ತು ರಶ್ಮಿದೀಪಾ ನಿರೂಪಿಸಿ, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ವಂದಿಸಿದರು. ರೋಟರಿ ಮಿಸ್ಟಿ ಹಿಲ್ಸ್ ತಂಡದ ಪ್ರಧಶ೯ನ ನೃತ್ಯ, ಹಾಡು ಗಮನ ಸೆಳೆಯಿತು.
ತೀಪು೯ಗಾರರಾಗಿ ಮಾದಾಪುರ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನ ಉಪನ್ಯಾಸಕಿ ಸೀಮಾ ಮಂದಪ್ಪ, ಕುಶಾಲನಗರ ಜ್ಞಾನಗಂಗ ವಸತಿ ಶಾಲೆಯ ಉಪನ್ಯಾಸಕಿ ರಶ್ಮಿ ಉತ್ತಪ್ಪ, ವಿರಾಜಪೇಟೆ ಸಂತ ಅನ್ನಮ್ಮ ಪ.ಪೂ.ಕಾಲೇಜಿನ ಉಪನ್ಯಾಸಕಿ ಪ್ರತಿಮಾರೈ ಇದ್ದರು. ವಲಯ 6 ರ 14 ರೋಟರಿ ಕ್ಲಬ್ ಗಳ 210 ಸದಸ್ಯರು, ಕುಟುಂಬಸ್ಥರು ಸಾಂಸ್ಕೃತಿಕ ಸ್ಪಧೆ೯ಗಳಲ್ಲಿ ಪಾಲ್ಗೊಂಡಿದ್ದರು. ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರು ಜನವರಿ 6 ರಂದು ಮೈಸೂರಿನಲ್ಲಿ ಆಯೋಜಿತ ಜಿಲ್ಲಾ ರೋಟರಿಯ ಸಾಂಸ್ಕೃತಿಕ ಸ್ಪಧೆ೯ಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ತಿಳಿಸಿದ್ದಾರೆ.