ಮಡಿಕೇರಿ ಡಿ.22 : ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಟ್ರಸ್ಟ್ ವತಿಯಿಂದ ಏ.19 ರಿಂದ 28 ರವರೆಗೆ ಮೂರ್ನಾಡಿನಲ್ಲಿ 20ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆದಂ ಕುಶಾಲನಗರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾ ವ್ಯಾಪ್ತಿಯ ವಿವಿಧ ಜಮಾಅತ್‍ಗಳ 180 ತಂಡಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಕ್ಕೆ 77,786 ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ 37,786 ರೂ. ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ 17,786 ರೂ. ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ 4ನೇ ಸ್ಥಾನ ಪಡೆಯುವ ತಂಡಕ್ಕೆ 7,786 ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಕತ್ತೂರು ಮಾತನಾಡಿ, ಸಮುದಾಯ ಬಾಂಧವರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 120 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜೇತ ತಂಡಕ್ಕೆ 11,313 ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 6,313 ರೂ. ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9740481278, 9448899343 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಮುಸ್ಲಿಂ ಕಪ್ ಸಂಸ್ಥಾಪಕ ಅಬ್ದುಲ್ ರಶೀದ್ ಎಡಪಾಲ ಮಾತನಾಡಿ, ಕಳೆದ 20 ವರ್ಷಗಳಿಂದ ಪಂದ್ಯಾವಳಿಯನ್ನು ದಾನಿಗಳ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಸರ್ಕಾರ ಅಗತ್ಯ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಕಳೆದ ಸಾಲಿನ ಪಂದ್ಯಾವಳಿಯ ಬಳಿಕ ಉಳಿಕೆ ಹಣದಲ್ಲಿ ಜಾತಿ ಮತ ಭೇದವಿಲ್ಲದೆ ಅಂಗ ವೈಕಲ್ಯತೆ ಹೊಂದಿರುವವರಿಗೆ 10 ವೀಲ್ ಚೇರ್‍ಗಳನ್ನು ನೀಡಲಾಗಿದೆ. ಈ ಬಾರಿಯೂ ಪಂದ್ಯಾವಳಿ ಬಳಿಕ ಉಳಿಕೆ ಹಣವನ್ನು ಅಗತ್ಯವಿರುವವರ ನೆರವಿಗೆ ಬಳಸಲಾಗುತ್ತದೆ. ಪಂದ್ಯಾವಳಿ ಸಂದರ್ಭ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ರಾಸಿಕ್ ವೀರಾಜಪೇಟೆ, ನಿರ್ದೇಶಕರುಗಳಾದ ಎಂ.ಎ.ಹನೀಫ್ ಮೇಕೇರಿ ಹಾಗೂ ಅಬ್ದುಲ್ ರಜಾಕ್ ಎಡಪಾಲ ಉಪಸ್ಥಿತರಿದ್ದರು.








