ಮಡಿಕೇರಿ ಡಿ.23 : ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಂಜನೇಯ ದೇವಾಲಯದ ಸಮಿತಿ ವತಿಯಿಂದ ಡಿ.24 ರಂದು ನಡೆಯಲಿರುವ ಹನುಮ ಜಯಂತಿ ಆಚರಣೆ ಅಂಗವಾಗಿ ಅನ್ನದಾನ ಹಾಗೂ 9 ಸಮಿತಿ ವತಿಯಿಂದ ಅಲಂಕೃತ ಮೆರವಣಿಗೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 13 ಸಾವಿರದಿಂದ 15 ಸಾವಿರದಷ್ಟು ಜನ ಸೇರುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಡಿ.24ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕುಶಾಲನಗರ ಮತ್ತು ಸುತ್ತಮುತ್ತಲ 20 ಕಿ.ಮೀ ವ್ಯಾಪ್ತಿಯ ಎಲ್ಲಾ ರೀತಿಯ ಮದ್ಯದ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ.










