ಮಡಿಕೇರಿ ಡಿ.23 – ಕೊಡಗಿನ ಯುವ ಮೋಟಾರ್ ರ‍್ಯಾಲಿ ಸಾಧಕ ಅಭಿನ್ ರೈ, ಪ್ರತಿಷ್ಟಿತ ಇಂಡಿಯನ್ ನ್ಯಾಷನಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರು ಬಳಿಯ ಗುಬ್ಬಿಯಲ್ಲಿ ಮುಕ್ತಾಯವಾದ ಇಂಡಿಯನ್ ರ‍್ಯಾಲಿ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿ ಅಭಿನ್ ರೈ ಹೊರಹೊಮ್ಮಿದರು.
ಇಂಡಿಯನ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4 ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿರುವ ಅಬಿನ್, ಇದಕ್ಕೂ ಮೊದಲು ಅರುಣಾಚಲ ಪ್ರದೇಶ, ಚೆನ್ನೈ , ಕೊಯಮತ್ತೂರು, ಹೈದರಾಬಾದ್, ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಸೇರಿದಂತೆ ಆರು ರ‍್ಯಾಲಿಗಳಲ್ಲಿಯೂ ಅತ್ಯುತ್ತಮ ಅಂಕ ಗಳಿಸಿ ರಾಷ್ಟ್ರೀಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಬಿನ್ ರೈ ಮೇಕೇರಿ ಗ್ರಾಮದ ಹೋಟೆಲ್ ಉದ್ಯಮಿ ರತ್ನಾಕರ್ ರೈ ಮತ್ತು ನಮಿತಾ ರೈ ದಂಪತಿ ಪುತ್ರರಾಗಿದ್ದು, ಈಗಾಗಲೇ ಹಲವಾರು ಮೋಟಾರ್ ಚಾಂಪಿಯನ್ ಶಿಪ್ ರ‍್ಯಾಲಿಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.









