ಸೋಮವಾರಪೇಟೆ ಡಿ.23 : ಸಂಸತ್ ಭವನ ಆವರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಉಪರಾಷ್ಟ್ರಪತಿ ಜಗದೀಪ್ ಧನಕರ್, ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಮಾತನಾಡಿ, ಸಂಸತ್ ಭವನ ಎಂಬುದು ಪ್ರಜಾದೇಗುಲವಾಗಿದ್ದು, ರಾಷ್ಟ್ರದ ಎರಡನೇ ಪ್ರಜೆಯನ್ನು ಅಣುಕ ಮಾಡಿರುವುದು ಖಂಡನೀಯವಾಗಿದೆ. ವಿರೋಧ ಪಕ್ಷಗಳು ನಡೆಸುತ್ತಿರುವ ಕುಚೇಷ್ಟೆಗಾಗಿ ಅನೇಕ ಸಂಸದರು ಸಸ್ಪೆಂಡ್ ಆಗಿದ್ದಾರೆ. ದ್ವೇಷಕ್ಕಾಗಿ ಮಾಡಿದ ಇಂತಹ ಕೃತ್ಯವನ್ನು ದೇಶದ ಪ್ರಜೆಗಳು ಕ್ಷಮಿಸುವುದಿಲ್ಲ. ಈ ಕೃತ್ಯ ಎಸಗಿದ ಹಾಗು ಕುಮ್ಮಕ್ಕು ನೀಡಿದವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಎಸ್.ಆರ್.ಸೋಮೇಶ್, ಮಹೇಶ್ ತಿಮ್ಮಯ್ಯ, ಎಚ್.ಕೆ.ಮಾದಪ್ಪ, ತಾಕೇರಿ ಪೊನ್ನಪ್ಪ, ಮೋಹನ್‌ದಾಸ್, ಶಿವಪ್ಪ, ಮೃತ್ಯುಂಜಯ, ಬಿ.ಆರ್,ಮಹೇಶ್, ಪ್ರಶಾಂತ್ ಮತ್ತಿತರರು ಇದ್ದರು.











