ನಾಪೋಕ್ಲು ಡಿ.25 : ಕಕ್ಕುಂದ ಕಾಡು ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ದರ್ಶನ ಹಾಗೂ ಪೂಜಾ ಕಾರ್ಯಗಳೊಂದಿಗೆ ಸಂಪನ್ನಗೊಂಡಿತ್ತು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಿತು.
ನಂತರ ಶ್ರೀ ವೆಂಕಟೇಶ್ವರನಿಗೆ ಗಂಟೆ ಜಾಗಟ ವೇದ ಘೋಷಗಳೊಂದಿಗೆ ವಿಶೇಷ ಮಹಾ ಪೂಜೆ ನೆರವೇರಿ, ಮಹಾ ಮಂಗಳಾರತಿಯ ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು.
ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆಯಿಂದ ಭಗವಾನ್ ಭಕ್ತರು ಅಧಿಕ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥ ಸೇವೆಗಳನ್ನು ನೆರವೇರಿಸಿಕೊಂಡರು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್.ಮಂಜಯ್ಯ, ಗೌರವ ಕಾರ್ಯಾಧ್ಯಕ್ಷ ಟಿ ಎನ್ ರಮೇಶ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ.ಖಜಾಂಜಿ ಯನ್. ಪಿ.ಗೋಪಾಲ ಹಾಗೂ ಹಿರಿಯರಾದ ಟಿ.ವಿ.ಶ್ರೀನಿವಾಸ್, ಟಿ.ಎ.ಆನಂದಸ್ವಾಮಿ, ಅಡಳಿತ ಮಂಡಳಿ ನಿರ್ದೇಶಕರಾದ ಟಿ.ಕೆ.ಸೂರ್ಯಕುಮಾರ, ಟಿ.ವಿ. ಭವಾನಿ ಹಾಗೂ ಇತರರು ಹಾಜರಿದ್ದರು. ದೇವಾಲಯದ ಮುಖ್ಯ ಅರ್ಚಕ ಸುದೀರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ವರದಿ : ದುಗ್ಗಳ ಸದಾನಂದ










