ಮಡಿಕೇರಿ, ಡಿ. 25 : ಅತ್ಯಂತ ಕುತೂಹಲ ಮೂಡಿಸಿದ್ದ ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ನಿಯಮಿತ ಬ್ಯಾಂಕ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತರು ಅತೀ ಹೆಚ್ಚು ಸ್ಥಾನ ಪಡೆದು ಕೊಂಡಿದ್ದಾರೆ.
ನಗರದ ಬಾಲಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 1,614 ಮತಗಳ ಪೈಕಿ 1,372 ಮಂದಿ ಮತಚಲಾಯಿಸಿದರು.
ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಮೀಸಲು, ಪ್ರವರ್ಗ ಎ ಹಾಗೂ ಬಿ ವಿಭಾಗಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದ 7 ಸ್ಥಾನಕ್ಕೆ 20 ಮಂದಿ, ಮಹಿಳಾ ಕ್ಷೇತ್ರದ 2 ಸ್ಥಾನಕ್ಕೆ 4, ಪರಿಶಿಷ್ಟ ಜಾತಿ ಕ್ಷೇತ್ರದ 1 ಸ್ಥಾನಕ್ಕೆ 2, ಪರಿಶಿಷ್ಟ ಪಂಗಡ ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಲ್ಲಿ ಬಿಜೆಪಿ ಬೆಂಬಲಿತರು ಸಾಮಾನ್ಯ ಕ್ಷೇತ್ರದ ಒಂದು ಸ್ಥಾನ ಹೊರತುಪಡಿಸಿ ಬೇರೆಲ್ಲ ವಿಭಾಗದಲ್ಲಿ ಜಯ ಸಾಧಿಸಿ ಸ್ಪಷ್ಟಬಹುಮತ ದಾಖಲಿಸಿದ್ದಾರೆ.
ಮತಗಳ ವಿವರ :: ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಕನ್ನಂಡ ಸಂಪತ್ 649 ಮತಗಳು, ಆರಾಧನ ಗಿರೀಶ್ 595, ಸಿ.ಕೆ.ಬಾಲಕೃಷ್ಣ 685, ಬಿ.ಕೆ. ಜಗದೀಶ್ 738, ಬಿ.ವಿ. ರೋಶನ್ 531, ಜಿ.ಎಂ.ಸತೀಶ್ ಪೈ ಗೋಕುಲ 658 ಮತ ಗಳಿಸಿ ಗೆಲುವು ದಾಖಲಿಸಿದರೆ ವಿ.ಆರ್.ಮನುಮಂಜುನಾಥ್ 394 ಮತ ಪಡೆದು ಸೋಲು ಅನುಭವಿಸಿದರು.
ಬಿ.ವೈ.ರಾಜೇಶ್ 798 ಮತ ಗಳಿಸಿ ಕಾಂಗ್ರೆಸ್ ಬೆಂಬಲಿತರಾಗಿ ಗೆಲುವು ಸಾಧಿಸಿದ ಏಕೈಕ ಸ್ಪರ್ಧಿಯಾಗಿದ್ದಾರೆ.
ಉಳಿದಂತೆ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ್ದ ಅಂಬೇಕಲ್ಲು ನವೀನ್ ಕುಶಾಲಪ್ಪ 500 ಮತಗಳು, ಆಪಾಡಂಡ ಅಚ್ಚಯ್ಯ 301, ಕೆ.ಯು.ಅಶ್ರಫ್ 380, ಟಿ.ಹೆಚ್.ಉದಯಕುಮಾರ್ 367, ಬಿ.ಪಿ.ಗುರುಕಿರಣ್ 380, ಜಿ.ಸಿ ಜಗದೀಶ್ 317, ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪೆÇನ್ನಚ್ಚನ ಮಧು 451, ಧನಂಜಯ 209, ಧರ್ಮಪಾಲ್ 244, ಎನ್.ಬಿ.ಪಾಲಕ್ಷ 98, ಎನ್.ಎ. ಸತೀಶ್ ಪೈ 217, ಎಂ.ಖಲೀಲ್ 134 ಮತಗಳನ್ನು ಪಡೆದು ಸೋಲು ಅನುಭವಿಸಿದರು. 73 ಮತಗಳು ತಿರಸ್ಕೃತಗೊಂಡವು.

ಪರಿಶಿಷ್ಟ ಜಾತಿ ವಿಭಾಗದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಎಸ್.ಸಿ.ಸತೀಶ್ 660 ಮತಗಳಿಂದ ಜಯಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ವಿಶಾಲ್ ನಂದಕುಮಾರ್ 654 ಮತಗಳನ್ನು ಪಡೆದರು. 60 ಮತಗಳು ತಿರಸ್ಕೃತಗೊಂಡವು.
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಕೆ.ಆರ್.ನಾಗೇಶ್ 933 ಮತಗಳನ್ನು ಪಡೆದು ವಿಜಯ ಸಾಧಿಸಿದರು. ಕಾಂಗ್ರೆಸ್ ಬೆಂಬಲಿತ ವಾಸುದೇವ್ 358 ಮತಗಳನ್ನು ಪಡೆದರೆ 81 ಮತಗಳು ತಿರಸ್ಕೃತಗೊಂಡವು.
ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಕೇಟೋಳಿರ ಮಾಚಮ್ಮ 808 ಹಾಗೂ ಪ್ರತಿಭಾ ಶೆಟ್ಟಿ 688 ಮತಗಳಿಂದ ಗೆಲುವು ದಾಖಲಿಸಿದರು. ಕಾಂಗ್ರೆಸ್ ಬೆಂಬಲಿತರಾದ ಸಂಗೀತಾ 507, ಕೂಡಕಂಡಿ ಕಾವೇರಮ್ಮ ಸೋಮಣ್ಣ 593 ಮತಪಡೆದರೆ 32 ಮತಗಳು ತಿರಸ್ಕೃತಗೊಂಡವು.
ಪ್ರವರ್ಗ ಎ ಕ್ಷೇತ್ರದಿಂದ 709 ಮತಗಳಿಂದ ಬಿಜೆಪಿ ಬೆಂಬಲಿತ ಬಿ.ಎಂ. ರಾಜೇಶ್ ಗೆಲುವಿನ ನಗೆಬೀರಿದರು. ಕಾಂಗ್ರೆಸ್ ಬೆಂಬಲಿತ ಪ್ರಕಾಶ್ ಆಚಾರ್ಯ 597 ಮತಗಳಿಂದ ಸೋಲೊಪ್ಪಿಕೊಂಡರು. 71 ಮತಗಳು ತಿರಸ್ಕೃತಗೊಂಡವು.
ಪ್ರವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮಹೇಶ್ ಜೈನಿ 745 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಬೆಂಬಲಿತ ಮಂಡೀರ ಸದಾ ಮುದ್ದ 554 ಮತ ಪಡೆದ ಪರಭಾವಗೊಂಡರು. 74 ಮತಗಳ ತಿರಸ್ಕೃತಗೊಂಡವು.
ಚುನಾವಣಾಧಿಕಾರಿಯಾಗಿ ಬಿ.ಕೆ.ವಿಜಯೇಂದ್ರ ಕಾರ್ಯನಿರ್ವಹಿಸಿದರು.











