ಸುಂಟಿಕೊಪ್ಪ ಡಿ.25 : ಮಂಜಿಕೆರೆ ಗ್ರಾಮದಲ್ಲಿರುವ ಶ್ರೀ ಆಧಿಶಕ್ತಿ, ಚಾಮುಂಡೇಶ್ವರಿ, ಶ್ರೀ ಪಾಷಣ ಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ 4ನೇ ವರ್ಷದ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಸಂಜೆ ಭಂಡಾರ ಪೂಜೆ, ಕಲ್ಲುರ್ಟಿ ಕಲ್ಕುಡ ದೈವಗಳ ನೇಮ, ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೈವಗಳ ನೇಮ, ಶ್ರೀ ಭಧ್ರಕಾಳೇಶ್ವರಿ ದೈವದ ನೇಮ ನಡೆಯಿತು.
ಮರುದಿನ ಬೆಳಿಗ್ಗೆ ಕೊರಗ ಮತ್ತು ತನಿಯಾ ದೈವಗಳ ಕೋಲ ನೇಮೋತ್ಸವ ಜರುಗಿತು.
ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇವಾಲಯದ ವತಿಯಿಂದ ಅನ್ನದಾನ ನಡೆಯಿತು.









