ಸೋಮವಾರಪೇಟೆ ಡಿ.25 : ಸೋಮವಾರಪೇಟೆ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಸದರ ನಿಧಿಯಿಂದ ರೂ. 10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹೇಳಿದರು. ಹಲವು ದಶಕಗಳ ಹಿಂದೆ ನಿರ್ಮಾಣವಾಗಿರುವ ಬಸವೇಶ್ವರ ದೇವಾಲಯ ಮತ್ತು ಹಿಂಭಾಗದಲ್ಲಿರುವ ಅನ್ನದಾಸೋಹ ಕೊಠಡಿಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಮಿತಿಯ ಪ್ರಮುಖರು ಮಾಡಿದ ಮನವಿಗೆ ಸಂಸದರು ಸ್ಪಂದಿಸಿದರು.
ಈ ಸಂದರ್ಭ ದೇವಾಲಯ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜು, ಪ್ರಮುಖರಾದ ಕೆ.ಜಿ. ಸುರೇಶ್, ಶಿವರಾಜ್, ಗಿರೀಶ್ ಇದ್ದರು.











